ಪರಮಹಂಸ ಯೋಗಾನಂದರಿಂದ ಧ್ಯಾನ ಮತ್ತು ಕ್ರಿಯಾ ಯೋಗ

ಯೋಗಾನಂದರಿಂದ ಧ್ಯಾನ

ಧ್ಯಾನವೆಂದರೇನು?

ಧ್ಯಾನವೆಂದರೆ, ಆತ್ಮವು ಅನಂತ ಚೇತನ ಅಥವಾ ಭಗವಂತನೊಂದಿಗೆ ಮತ್ತೆ ಐಕ್ಯವಾಗುವ ವಿಜ್ಞಾನವಾಗಿದೆ. ನಿಯತವಾಗಿ ಮತ್ತು ಆಳವಾಗಿ ಧ್ಯಾನ ಮಾಡುವ ಮೂಲಕ, ನಿಮ್ಮ ಆತ್ಮವನ್ನು ಅಂದರೆ ನಿಮ್ಮ ಅಸ್ತಿತ್ವದ ಅಂತರಾಳದಲ್ಲಿರುವ ಅಮರ, ಆನಂದದಾಯಕ ದಿವ್ಯ ಪ್ರಜ್ಞೆಯನ್ನು ನೀವು ಜಾಗೃತಗೊಳಿಸುವಿರಿ. ಯೋಗ ಧ್ಯಾನವು ನಮ್ಮ ಆತ್ಮದ ಅನಂತ ಸಾಮರ್ಥ್ಯವನ್ನು ಬಿಡುಗಡೆ ಮಾಡುವ ಕಾಲ-ಪರೀಕ್ಷಿತ ಮಾರ್ಗವಾಗಿದೆ. ಇದು ಆಲೋಚನೆ ಅಥವಾ ತಾತ್ವಿಕ ಚಿಂತನೆಯ ಅಸ್ಪಷ್ಟ ಮಾನಸಿಕ ಪ್ರಕ್ರಿಯೆಯಲ್ಲ. ಇದು ಜೀವನದ ಗೊಂದಲಗಳಿಂದ ಗಮನವನ್ನು ಮುಕ್ತಗೊಳಿಸುವ ನೇರ ಸಾಧನವಾಗಿದೆ, ನಮ್ಮ ನಿಜವಾದ ಆತ್ಮವನ್ನು, ಅಂದರೆ ನಿಜವಾಗಿಯೂ ಅದ್ಭುತ ದಿವ್ಯ ಅಸ್ತಿತ್ವವಾದ ನಮ್ಮನ್ನು, ಅರಿತುಕೊಳ್ಳುವುದರಿಂದ ನಮ್ಮನ್ನು ತಡೆಯುವ ಪ್ರಕ್ಷುಬ್ಧ ಮತ್ತು ಚಂಚಲ ಆಲೋಚನೆಗಳನ್ನು ಇದು ನಿಶ್ಚಲಗೊಳಿಸುತ್ತದೆ. ಧ್ಯಾನದ ಶಿಸ್ತಿನ ಮೂಲಕ, ನಾವು ಆಂತರ್ಯದಲ್ಲಿ ಕೇಂದ್ರೀಕರಿಸಲು ಕಲಿಯುತ್ತೇವೆ, ನಮ್ಮ ಅಚಲವಾದ ಶಾಂತಿ ಮತ್ತು ಆನಂದದ ಕೇಂದ್ರವನ್ನು ಕಂಡುಕೊಳ್ಳುತ್ತೇವೆ.

ನೀವು ಧ್ಯಾನದಲ್ಲಿ ಪ್ರಗತಿ ಹೊಂದುತ್ತಿದ್ದಂತೆ, ಕ್ರಮೇಣ ನೀವು ಆತ್ಮದಿಂದ ಬರುವ ಸದಾ ವೃದ್ಧಿಸುತ್ತಿರುವ ಆಂತರಿಕ ಶಾಂತಿ ಮತ್ತು ಸಂತೋಷವನ್ನು ಅನುಭವಿಸುತ್ತೀರಿ. ಅತ್ಯಂತ ಉನ್ನತ ಸ್ಥಿತಿಗಳಲ್ಲಿ, ನಿಮ್ಮ ಆತ್ಮವು ಭಗವಂತನೊಂದಿಗೆ ತನ್ನ ಸಂಪೂರ್ಣ ಏಕತೆಯನ್ನು ಕಂಡುಕೊಳ್ಳುತ್ತದೆ. ಇದೇ ಧ್ಯಾನದ ಗುರಿಯಾಗಿದೆ — ಭಾವಪರವಶತೆಯ, ಅತೀತಪ್ರಜ್ಞೆಯ, ಆನಂದದಾಯಕ ದಿವ್ಯ ಸಂಸರ್ಗ, ಇದನ್ನು ಸಮಾಧಿ ಎಂದು ಕರೆಯಲಾಗುತ್ತದೆ.

ಪರಮಹಂಸ ಯೋಗಾನಂದರು ಕ್ರಿಯಾ ಯೋಗ ವಿಜ್ಞಾನದ ಅಂಗವಾಗಿ ಶಕ್ತಿಯುತ ಧ್ಯಾನ ತಂತ್ರಗಳ ವ್ಯವಸ್ಥೆಯನ್ನು ಬೋಧಿಸಿದ್ದಾರೆ. ಈ ತಂತ್ರಗಳು ಯೋಗದಾ ಸತ್ಸಂಗ ಪಾಠಗಳ ಮೂಲಕ ಲಭ್ಯವಿರುತ್ತವೆ. ಧ್ಯಾನದ ಅತ್ಯುನ್ನತ ತಂತ್ರಗಳನ್ನು ಕಲಿಯಲು ಮತ್ತು ಪ್ರಯೋಜನ ಪಡೆಯಲು ಬಯಸುವ ಯಾರೇ ಆದರೂ ಈ ಪಾಠಗಳನ್ನು ಅಮೂಲ್ಯವಾದ ಸಾಧನ ಮತ್ತು ಜೀವಿತಾವಧಿಯ ಆಧಾರವೆಂದು ಪರಿಗಣಿಸುತ್ತಾರೆ.

ನೀವು ಯೋಗದಾ ಸತ್ಸಂಗ ಪಾಠಗಳಿಗೆ ಇನ್ನೂ ನೋಂದಾಯಿಸಿಕೊಂಡಿರದಿದ್ದರೆ, ಧ್ಯಾನ ಮಾಡುವುದು ಹೇಗೆ ಎಂಬ ಬಗ್ಗೆ ಕೆಲವು ಪ್ರಾಥಮಿಕ ಸೂಚನೆಗಳನ್ನು ಈ ಪುಟಗಳಲ್ಲಿ ಕಾಣಬಹುದು, ಧ್ಯಾನವು ತರುವ ಶಾಂತಿ ಮತ್ತು ದಿವ್ಯ ಪ್ರಜ್ಞೆಯನ್ನು ಅನುಭವಿಸಲು ನೀವು ಇದನ್ನು ಈಗಲೇ ಬಳಸಿಕೊಳ್ಳಬಹುದು.

ಧ್ಯಾನದಿಂದಾಗುವ ಪ್ರಯೋಜನಗಳು

ಧ್ಯಾನದ ಪ್ರಯೋಜನಗಳು ಅನೇಕ. ನಿಯತವಾದ ಅಭ್ಯಾಸದ ಮೂಲಕ, ಒಬ್ಬರ ಶರೀರ, ಮನಸ್ಸು ಮತ್ತು ಅಂತರಾಳದ ಪ್ರಜ್ಞೆಯಲ್ಲಿ ಸೂಕ್ಷ್ಮ ಪರಿವರ್ತನೆಗಳುಂಟಾಗುತ್ತವೆ. ಇವುಗಳಲ್ಲಿ ಕೆಲವು ಪ್ರಯೋಜನಗಳನ್ನು ಆಗಿಂದಾಗಲೇ ಅನುಭವಿಸಲಾಗುತ್ತದೆ; ಇನ್ನು ಕೆಲವು ಹಂತಹಂತವಾಗಿ ತೆರೆದುಕೊಳ್ಳುತ್ತವೆ ಮತ್ತು ಅವು ಸುವ್ಯಕ್ತವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಈ ಫಲಿತಾಂಶಗಳು, ಪ್ರಾಮಾಣಿಕ ಪ್ರಯತ್ನದಿಂದ ಮತ್ತು ಜೀವನದಲ್ಲಿ ಅಂತಿಮ ಗುರಿಯಾದ ನಿತ್ಯ ಆನಂದ ಮತ್ತು ಆತ್ಮ-ಸಾಕ್ಷಾತ್ಕಾರದ ಮೂಲಕ ಭಗವಂತನೊಂದಿಗೆ ಸಾಯುಜ್ಯವನ್ನು ಕಂಡುಕೊಳ್ಳುವವರೆಗೆ ಶ್ರಮಿಸುವುದನ್ನು ಮುಂದುವರಿಸುವ ಸಂಕಲ್ಪವನ್ನು ಚಲನಗೊಳಿಸುವುದರಿಂದ ಬರುತ್ತವೆ.

ಪರಮಹಂಸ ಯೋಗಾನಂದರ ಬರಹಗಳಿಂದ:

“ಧ್ಯಾನ ಮಾಡುವುದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡಲು ನೀವು ಶಕ್ತರಾಗಿದ್ದರೂ, ಆಲೋಚನೆಗಳು ಮೌನವಾಗಿರುವಾಗ ಮತ್ತು ನಿಮ್ಮ ಮನಸ್ಸು ಭಗವಂತನ ಶಾಂತಿಯೊಂದಿಗೆ ಶ್ರುತಿಗೂಡಿಕೊಂಡಿರುವಾಗ ಬರುವ ಆನಂದಕ್ಕೆ ಸಾಟಿಯಾದುದನ್ನು ನೀವು ಎಂದಿಗೂ ಕಾಣುವುದಿಲ್ಲ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ
ಯೋಗದಾ ಸತ್ಸಂಗ ಪಾಠಗಳು

Lillies on pond

ಧ್ಯಾನವು ಭಗವತ್‌-ಸಾಕ್ಷಾತ್ಕಾರದ ವಿಜ್ಞಾನ. ಇದು ಪ್ರಪಂಚದಲ್ಲೇ ಅತ್ಯಂತ ಪ್ರಾಯೋಗಿಕ ವಿಜ್ಞಾನ. ಅದರ ಮೌಲ್ಯವನ್ನು ಅರ್ಥಮಾಡಿಕೊಂಡಾಗ ಮತ್ತು ಅದರ ಪ್ರಯೋಜನಕಾರಿ ಪರಿಣಾಮಗಳನ್ನು ಅನುಭವಿಸಿದಾಗ ಹೆಚ್ಚಿನ ಜನರು ಧ್ಯಾನ ಮಾಡಬಯಸುತ್ತಾರೆ. ಧ್ಯಾನದ ಅಂತಿಮ ಉದ್ದೇಶವೆಂದರೆ ಭಗವಂತನ ಪ್ರಜ್ಞಾಪೂರ್ವಕ ಅರಿವು ಮತ್ತು ಅವನೊಂದಿಗಿನ ಆತ್ಮದ ಶಾಶ್ವತ ಏಕತೆಯನ್ನು ಹೊಂದುವುದು. ಸೃಷ್ಟಿಕರ್ತನ ಸರ್ವವ್ಯಾಪಿತ್ವ ಮತ್ತು ಸರ್ವಶಕ್ತತೆಗಾಗಿ, ಸೀಮಿತ ಮಾನವ ಸಾಮರ್ಥ್ಯಗಳ ಬಳಕೆಗಿಂತ ಹೆಚ್ಚು ಉದ್ದೇಶಪೂರ್ವಕ ಮತ್ತು ಉಪಯುಕ್ತವಾದ ಸಾಧನೆ ಯಾವುದಿರಲು ಸಾಧ್ಯ? ಭಗವತ್‌-ಸಾಕ್ಷಾತ್ಕಾರವು ಧ್ಯಾನಸ್ಥರಿಗೆ ಭಗವಂತನ ಶಾಂತಿ, ಪ್ರೇಮ, ಆನಂದ, ಶಕ್ತಿ ಮತ್ತು ಜ್ಞಾನದ ಅನುಗ್ರಹಗಳನ್ನು ನೀಡುತ್ತದೆ.

ಧ್ಯಾನವು ಅದರ ಅತ್ಯುನ್ನತ ರೂಪದಲ್ಲಿ ಏಕಾಗ್ರತೆಯನ್ನು ಬಳಸಿಕೊಳ್ಳುತ್ತದೆ. ಏಕಾಗ್ರತೆಯೆಂದರೆ ಗಮನವನ್ನು ಚಿತ್ತಚಾಂಚಲ್ಯಗಳಿಂದ ಮುಕ್ತಗೊಳಿಸುವುದು ಮತ್ತು ಅದನ್ನು ಆಸಕ್ತಿಯುಳ್ಳ ಯಾವುದೇ ಆಲೋಚನೆಯ ಮೇಲೆ ಕೇಂದ್ರೀಕರಿಸುವುದು. ಧ್ಯಾನವು ಏಕಾಗ್ರತೆಯ ವಿಶೇಷ ರೂಪವಾಗಿದೆ, ಇದರಲ್ಲಿ ಗಮನವು ಚಂಚಲತೆಯಿಂದ ಮುಕ್ತವಾಗಿರುತ್ತದೆ ಮತ್ತು ಭಗವಂತನ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದ, ಧ್ಯಾನವು ಭಗವಂತನನ್ನು ಅರಿಯಲು ಬಳಸುವ ಏಕಾಗ್ರತೆಯಾಗಿದೆ….

ಭಗವಂತನ ಉಪಸ್ಥಿತಿಯ ಮೊದಲ ಪುರಾವೆಯೆಂದರೆ ಅನಿರ್ವಚನೀಯ ಶಾಂತಿ. ಇದು ಮಾನವನ ಊಹೆಗೂ ನಿಲುಕದ ಆನಂದವಾಗಿ ವಿಕಸನಗೊಳ್ಳುತ್ತದೆ. ಒಮ್ಮೆ ನೀವು ಸತ್ಯ ಮತ್ತು ಜೀವದ ಮೂಲವನ್ನು ಸ್ಪರ್ಶಿಸಿದಿರೆಂದರೆ, ಇಡೀ ಪ್ರಕೃತಿಯು ನಿಮಗೆ ಪ್ರತಿಕ್ರಿಯಿಸುತ್ತದೆ.

lillies on pond, Natureಧ್ಯಾನವು ಭಗವತ್‌-ಸಾಕ್ಷಾತ್ಕಾರದ ವಿಜ್ಞಾನ. ಇದು ಪ್ರಪಂಚದಲ್ಲೇ ಅತ್ಯಂತ ಪ್ರಾಯೋಗಿಕ ವಿಜ್ಞಾನ. ಅದರ ಮೌಲ್ಯವನ್ನು ಅರ್ಥಮಾಡಿಕೊಂಡಾಗ ಮತ್ತು ಅದರ ಪ್ರಯೋಜನಕಾರಿ ಪರಿಣಾಮಗಳನ್ನು ಅನುಭವಿಸಿದಾಗ ಹೆಚ್ಚಿನ ಜನರು ಧ್ಯಾನ ಮಾಡಬಯಸುತ್ತಾರೆ. ಧ್ಯಾನದ ಅಂತಿಮ ಉದ್ದೇಶವೆಂದರೆ ಭಗವಂತನ ಪ್ರಜ್ಞಾಪೂರ್ವಕ ಅರಿವು ಮತ್ತು ಅವನೊಂದಿಗಿನ ಆತ್ಮದ ಶಾಶ್ವತ ಏಕತೆಯನ್ನು ಹೊಂದುವುದು. ಸೃಷ್ಟಿಕರ್ತನ ಸರ್ವವ್ಯಾಪಿತ್ವ ಮತ್ತು ಸರ್ವಶಕ್ತತೆಗಾಗಿ, ಸೀಮಿತ ಮಾನವ ಸಾಮರ್ಥ್ಯಗಳ ಬಳಕೆಗಿಂತ ಹೆಚ್ಚು ಉದ್ದೇಶಪೂರ್ವಕ ಮತ್ತು ಉಪಯುಕ್ತವಾದ ಸಾಧನೆ ಯಾವುದಿರಲು ಸಾಧ್ಯ? ಭಗವತ್‌-ಸಾಕ್ಷಾತ್ಕಾರವು ಧ್ಯಾನಸ್ಥರಿಗೆ ಭಗವಂತನ ಶಾಂತಿ, ಪ್ರೇಮ, ಆನಂದ, ಶಕ್ತಿ ಮತ್ತು ಜ್ಞಾನದ ಅನುಗ್ರಹಗಳನ್ನು ನೀಡುತ್ತದೆ.

ಧ್ಯಾನವು ಅದರ ಅತ್ಯುನ್ನತ ರೂಪದಲ್ಲಿ ಏಕಾಗ್ರತೆಯನ್ನು ಬಳಸಿಕೊಳ್ಳುತ್ತದೆ. ಏಕಾಗ್ರತೆಯೆಂದರೆ ಗಮನವನ್ನು ಚಿತ್ತಚಾಂಚಲ್ಯಗಳಿಂದ ಮುಕ್ತಗೊಳಿಸುವುದು ಮತ್ತು ಅದನ್ನು ಆಸಕ್ತಿಯುಳ್ಳ ಯಾವುದೇ ಆಲೋಚನೆಯ ಮೇಲೆ ಕೇಂದ್ರೀಕರಿಸುವುದು. ಧ್ಯಾನವು ಏಕಾಗ್ರತೆಯ ವಿಶೇಷ ರೂಪವಾಗಿದೆ, ಇದರಲ್ಲಿ ಗಮನವು ಚಂಚಲತೆಯಿಂದ ಮುಕ್ತವಾಗಿರುತ್ತದೆ ಮತ್ತು ಭಗವಂತನ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದ, ಧ್ಯಾನವು ಭಗವಂತನನ್ನು ಅರಿಯಲು ಬಳಸುವ ಏಕಾಗ್ರತೆಯಾಗಿದೆ…

ಭಗವಂತನ ಉಪಸ್ಥಿತಿಯ ಮೊದಲ ಪುರಾವೆಯೆಂದರೆ ಅನಿರ್ವಚನೀಯ ಶಾಂತಿ. ಇದು ಮಾನವನ ಊಹೆಗೂ ನಿಲುಕದ ಆನಂದವಾಗಿ ವಿಕಸನಗೊಳ್ಳುತ್ತದೆ. ಒಮ್ಮೆ ನೀವು ಸತ್ಯ ಮತ್ತು ಜೀವದ ಮೂಲವನ್ನು ಸ್ಪರ್ಶಿಸಿದಿರೆಂದರೆ, ಇಡೀ ಪ್ರಕೃತಿಯು ನಿಮಗೆ ಪ್ರತಿಕ್ರಿಯಿಸುತ್ತದೆ.

“ಭಗವಂತನನ್ನು ನೀವು ಒಳಗೆ ಕಂಡುಕೊಂಡಾಗ, ಅವನನ್ನು ಹೊರಗೆ, ಎಲ್ಲಾ ಜನರಲ್ಲಿ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ಕಾಣುವಿರಿ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ,
ಮೆಟಾಫಿಸಿಕಲ್‌ ಮೆಡಿಟೇಷನ್ಸ್

ಇದನ್ನು ಹಂಚಿಕೊಳ್ಳಿ