ಸಮೂಹ ಧ್ಯಾನವು ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳನ್ನು ಮತ್ತು ಅನುಭವಿ ಧ್ಯಾನಸ್ಥರನ್ನು ರಕ್ಷಿಸುವ ಕೋಟೆಯಾಗಿದೆ. ಒಟ್ಟಿಗೆ ಧ್ಯಾನ ಮಾಡುವುದರಿಂದ ಸಮೂಹದ ಕಾಂತೀಯತೆಯ ಅದೃಶ್ಯ ಸ್ಪಂದನಾತ್ಮಕ ವಿನಿಮಯದ ನಿಯಮದಿಂದಾಗಿ ಗುಂಪಿನ ಪ್ರತಿಯೊಬ್ಬ ಸದಸ್ಯರ ಆತ್ಮ-ಸಾಕ್ಷಾತ್ಕಾರದ ಮಟ್ಟವನ್ನು ಹೆಚ್ಚಿಸುತ್ತದೆ.
— ಪರಮಹಂಸ ಯೋಗಾನಂದ
ವೈ ಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ವೈಎಸ್‌ಎಸ್ ಆನ್‌ಲೈನ್ ಧ್ಯಾನ ಕೇಂದ್ರವನ್ನು ಜನವರಿ 31, 2021 ರಂದು ಉದ್ಘಾಟಿಸಿದರು.
ನಮ್ಮ ಪೂಜ್ಯ ಗುರು ಮತ್ತು ಸಂಸ್ಥಾಪಕರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರ ಪ್ರೇರಕ ಶಕ್ತಿಯಲ್ಲಿ, ನಾನು ನಿಮ್ಮನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆನ್‌ಲೈನ್ ಧ್ಯಾನ ಕೇಂದ್ರಕ್ಕೆ ಸಂತೋಷದಿಂದ ಸ್ವಾಗತಿಸುತ್ತೇನೆ. ಎಲ್ಲಾ ವೈಎಸ್‌ಎಸ್ ಕೇಂದ್ರಗಳು ಮತ್ತು ಮಂಡಳಿಗಳಂತೆ, ಈ ಆನ್‌ಲೈನ್ ತಾಣವನ್ನು, ಭಾರತದಲ್ಲಿನ ನಮ್ಮ ವೈಎಸ್‌ಎಸ್ ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈಎಸ್‌ಎಸ್ ಸಂನ್ಯಾಸಿಗಳು ನೋಡಿಕೊಳ್ಳುತ್ತಾರೆ ಮತ್ತು ಇದನ್ನು ಸ್ವಯಂಸೇವಕರು-ಭಕ್ತರ ಸಹಾಯದಿಂದ ನಡೆಸಲಾಗುತ್ತದೆ.
ಈ ಆನ್‌ಲೈನ್ ಕೇಂದ್ರದ ಮೂಲಕ, ಪ್ರಪಂಚದಾದ್ಯಂತ ಇರುವ ಅನೇಕ ವೈಎಸ್‌ಎಸ್ ಭಕ್ತರು ಮತ್ತು ಸ್ನೇಹಿತರೊಂದಿಗಿನ ಸಹಭಾಗಿತ್ವದಲ್ಲಿ, ಸಮೂಹ ಧ್ಯಾನ ಮತ್ತು ಪರಮಹಂಸಜಿಯವರ ಬೋಧನೆಗಳ ಅಧ್ಯಯನವನ್ನು ಅನುಭವಿಸುವ ಅನುಗ್ರಹವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಎದುರುನೋಡುತ್ತೇವೆ.
ದಿವ್ಯ ಸ್ನೇಹದಲ್ಲಿ,
ಸ್ವಾಮಿ ಚಿದಾನಂದ ಗಿರಿ
ಅಧ್ಯಕ್ಷರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ / ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್
ಯೋಗದಾ ಸತ್ಸಂಗ ಆಶ್ರಮ, ಕೇಂದ್ರ ಅಥವಾ ಮಂಡಳಿಗೆ ಸ್ವತಃ ಬಂದು ಭಾಗವಹಿಸುವುದರಿಂದ ಅನೇಕ ಸ್ಪಷ್ಟವಾದ ಮತ್ತು ಅಗ್ರಾಹ್ಯ ಪ್ರಯೋಜನಗಳಿವೆ ಮತ್ತು ಅವರಿಗೆ ಸಾಧ್ಯವಾಗುವುದಾದರೆ ವೈಯಕ್ತಿಕವಾಗಿ ಹಾಜರಾಗಲು ನಾವು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುತ್ತೇವೆ. ಆದರೆ, ಅನೇಕ ಭಕ್ತರು ವೈಎಸ್ಎಸ್ ಮಂಡಳಿ ಅಥವಾ ಕೇಂದ್ರದಿಂದ ದೂರದಲ್ಲಿ ವಾಸಿಸುತ್ತಿರುತ್ತಾರೆ – ಅಥವಾ ಇತರ ಕಾರಣಗಳಿಗಾಗಿ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ. ಈಗ ಎಲ್ಲ ಭಕ್ತರ ಸ್ಥಳ ಅಥವಾ ಸಂದರ್ಭಗಳು ಏನೇ ಇರಲಿ, ಅವರಿಗೆ ಸಮೂಹ ಧ್ಯಾನ ಮತ್ತು ಧ್ಯಾನ ಶಿಬಿರಗಳಲ್ಲಿ ಸತ್ಯವನ್ನು ಅರಸುತ್ತಿರುವ ಇತರ ಆತ್ಮಗಳೊಂದಿಗೆ ಆಧ್ಯಾತ್ಮಿಕ ಸಹಭಾಗಿತ್ವದಲ್ಲಿ ಒಟ್ಟಿಗೆ ಸೇರಲು ಸದವಕಾಶವಿದೆ.
ತಮ್ಮ ಜೀವಿತದುದ್ದಕ್ಕೂ, ಪರಮಹಂಸ ಯೋಗಾನಂದರು, ಒಬ್ಬರ ಸಾಧನೆಯನ್ನು ಆಳವಾಗಿಸಲು ಸಮೂಹ ಧ್ಯಾನವು ಬಹಳ ಅಮೂಲ್ಯವಾದುದು ಎಂದು ಹೇಳಿದ್ದಾರೆ. ನಿಮ್ಮ ಸ್ಥಳ ಅಥವಾ ಸಂದರ್ಭಗಳು ಏನೇ ಇದ್ದರೂ ಸಮೂಹ ಧ್ಯಾನಗಳಿಗೆ ಸೇರಲು ಈಗ ನಿಮಗೆ ಅವಕಾಶವಿದೆ.
ಆನ್‌ಲೈನ್ ಸಮೂಹ ಧ್ಯಾನದಲ್ಲಿ ಭಾಗವಹಿಸುವ ಮೂಲಕ, ನೀವು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಇರುವ ಪರಮಹಂಸ ಯೋಗಾನಂದಜಿಯವರ ಅನುಯಾಯಿಗಳೊಂದಿಗೆ ಧ್ಯಾನ ಮತ್ತು ದಿವ್ಯ ಸಂಸರ್ಗದ ಉನ್ನತೀಕರಿಸುವ ಅವಧಿಯಲ್ಲಿ ಸೇರಿಕೊಳ್ಳುತ್ತೀರಿ.
ಮುಂಬರುವ ದಿನಗಳಲ್ಲಿ, ಸಮೂಹ ಧ್ಯಾನದ ಕೊಡುಗೆಗಳೊಂದಿಗೆ ವಿವಿಧ ಧ್ಯಾನ ಸ್ವರೂಪಗಳನ್ನು ಸೇರಿಸಲಾಗುವುದು: ಅಲ್ಪಾವಧಿಯ, ದೀರ್ಘಾವಧಿಯ, ಕೀರ್ತನೆಗಳೊಂದಿಗೆ, ಇತ್ಯಾದಿ. ಆದಷ್ಟು ಬೇಗ, ನಾವು ಹಲವಾರು ಭಾರತೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭಿಸುತ್ತೇವೆ.
ಮುಂಬರುವ ತಿಂಗಳುಗಳಲ್ಲಿ ಆನ್‌ಲೈನ್ ಗ್ರಾಂಥಿಕ ಮತ್ತು ವೈಎಸ್‌ಎಸ್ ಪಾಠಗಳ ಅಧ್ಯಯನದ ಗುಂಪುಗಳನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ.
ಆನ್‌ಲೈನ್ ಧ್ಯಾನಕ್ಕೆ ಸೇರಲು ಈ ಹಂತಗಳನ್ನು ಅನುಸರಿಸಿ:
1. ಉಚಿತ ಝೂಮ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸಿ (ನೀವು ಅಕೌಂಟನ್ನು ತೆರೆಯುವ ಅಗತ್ಯವಿಲ್ಲ).
2. ಆನ್‌ಲೈನ್ ಧ್ಯಾನಗಳು ಮತ್ತು ವಿಶೇಷ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ನೋಡಿ..
3. ವೇಳಾಪಟ್ಟಿಯಲ್ಲಿನ ಈವೆಂಟ್ ಅನ್ನು ಒತ್ತಿ, ನಂತರ ಝೂಮ್ ಅನ್ನು ತೆರೆಯಲು ಮತ್ತು ಧ್ಯಾನಕ್ಕೆ ಸೇರಿಕೊಳ್ಳಲು ಈವೆಂಟ್ ವಿವರಣೆಯಲ್ಲಿ ನೀಲಿ ಝೂಮ್ ಲಿಂಕ್ ಅನ್ನು ಒತ್ತಿ.
ನೀವು ವೈಎಸ್‌ಎಸ್/ ಎಸ್‌ಆರ್‌ಎಫ್ ಕ್ರಿಯಾಬಾನ್ ಆಗಿದ್ದರೆ ಮತ್ತು ಆನ್‌ಲೈನ್ ಧ್ಯಾನ ನಿರ್ವಾಹಕರಾಗುವ ಅಥವಾ ಆನ್‌ಲೈನ್ ಸ್ವಾಗತಕಾರರಾಗುವ ಆಸಕ್ತಿ ಹೊಂದಿದ್ದರೆ, ದಯವಿಟ್ಟು ಸ್ವಯಂಸೇವಕ ಪೋರ್ಟಲ್‌ನಲ್ಲಿ ಸೈನ್ ಅಪ್ ಮಾಡಿ. ನಿಮ್ಮೊಂದಿಗೆ ಗುರುದೇವರ ಸೇವೆ ಮಾಡಲು ನಾವು ಎದುರು ನೋಡುತ್ತೇವೆ.
“ಅದು ನಿಜವಾಗಿಯೂ ಸಮೂಹ ಧ್ಯಾನದ ಪ್ರೇರಕ ಶಕ್ತಿಯನ್ನು ಸೆರೆಹಿಡಿಯಿತು. ಅದು ಅದ್ಭುತವಾಗಿತ್ತು. ಅದು ಜೊತೆಯಾಗಿ ಒಂದೆಡೆ ಸೇರಿ ಮಾಡುವ ಸಮೂಹ ಧ್ಯಾನಕ್ಕೆ ಎಷ್ಟು ಹೋಲುತ್ತದೆ ಎಂದು ನನಗೆ ಆಶ್ಚರ್ಯವಾಯಿತು!”
“ನಮ್ಮ ಆನ್‌ಲೈನ್ ಧ್ಯಾನದಲ್ಲಿ ನನಗೆ ಬಹಳ ಒಳ್ಳೆಯ ಅನುಭವವಾಯಿತು. ನಾವು ಗುಂಪಿನ ಭಾಗವಾಗಿದ್ದೇವೆ ಎಂದು ನಿಜವಾಗಿಯೂ ಅನಿಸುತ್ತದೆ!”
“ಬೇಗನೆ ಎದ್ದು ಧ್ಯಾನ ಮಾಡಲು ಮತ್ತು ಭಕ್ತರೊಂದಿಗೆ ಕುಳಿತು ನೇರ ಕೀರ್ತನೆಗಳನ್ನು ಕೇಳಲು ಸಾಧ್ಯವಾಗುವುದು ತುಂಬಾ ಸಂತೋಷವೆನಿಸುತ್ತದೆ!”
“ನಾನು ಧ್ಯಾನವನ್ನು ಇಷ್ಟಪಟ್ಟೆ ಮತ್ತು ಪ್ರತಿದಿನ ಇವುಗಳನ್ನು ಮಾಡಬಲ್ಲೆ. ಸಮಯ ಹಾರಿದಂತೆನಿಸಿತು ಮತ್ತು ಅದು ತುಂಬಾ ಅಪ್ಯಾಯಮಾನವಾಗಿತ್ತು!”
“ನಾನು ಅದನ್ನು ನಿಜವಾಗಿಯೂ ಆನಂದಿಸಿದೆ. ನನಗೆ ಗುಂಪಿನ ಶಕ್ತಿ ಮತ್ತು ಸಂಪರ್ಕವನ್ನು ಅನುಭವಿಸಲು ಸಾಧ್ಯವಾಯಿತು.”
ಇದನ್ನು ಇಲ್ಲಿ ಶೇರ್ ಮಾಡಿ