ಶ್ರೀ ಯೋಗಾನಂದರು ಕ್ರಿಯಾ ಯೋಗ ಧ್ಯಾನದ ವಿಜ್ಞಾನವನ್ನು ಹೇಗೆ ಅಭ್ಯಾಸ ಮಾಡುವುದು ಎಂಬುದರ ಬಗ್ಗೆ 30 ವರ್ಷಗಳಿಗೂ ಹೆಚ್ಚು ಕಾಲ ತೆಗೆದುಕೊಂಡಿರುವ ತರಗತಿಗಳಲ್ಲಿ ನೀಡಿರುವ ವೈಯಕ್ತಿಕ ಸಲಹೆಗಳಿಂದ ತೆಗೆದುಕೊಂಡದ್ದು, ಯೋಗದಾ ಸತ್ಸಂಗದ ಪಾಠಗಳಲ್ಲಿ ವಿಸ್ತೃತವಾಗಿ ಪ್ರಸ್ತುತಪಡಿಸಲಾಗಿದೆ.
ಅಷ್ಟೇ ಅಲ್ಲದೆ, ಪಾಠಗಳು ಸಮತೋಲಿತ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮವನ್ನು ಸಿದ್ಧಿಸಿಕೊಳ್ಳಲು, ಅವರ ಕಾರ್ಯೋಪಯೋಗಿ ಮಾರ್ಗದರ್ಶನ ಹಾಗೂ ತಂತ್ರಗಳನ್ನು ನೀಡುತ್ತವೆ–ಜೀವನದ ಪ್ರತಿಯೊಂದು ನಿಟ್ಟಿನಲ್ಲೂ ಆರೋಗ್ಯ, ಉಪಶಮನ, ಯಶಸ್ಸು, ಹಾಗೂ ಸಾಮರಸ್ಯವನ್ನು ಯೋಗವು ನೀಡುತ್ತದೆ. “ಹೇಗೆ-ಬಾಳುವುದು” ಎಂಬ ಈ ತತ್ತ್ವಗಳು ಯಾವುದೇ ನೈಜ ಯಶಸ್ವೀ ಧ್ಯಾನಾಭ್ಯಾಸದ ಸಂಪೂರ್ಣ ಅತ್ಯಾವಶ್ಯಕ ಭಾಗವಾಗಿವೆ.
ನೀವು ಈಗಾಗಲೇ ಯೋಗದಾ ಸತ್ಸಂಗ ಪಾಠಗಳಿಗೆ ದಾಖಲಾತಿ ಮಾಡಿಕೊಂಡಿರದೇ ಇದ್ದಲ್ಲಿ, ಈ ಪುಟಗಳಲ್ಲಿ ಕೆಲವು ಹೇಗೆ ಧ್ಯಾನ ಮಾಡಬೇಕು ಎಂಬುದರ ಬಗ್ಗೆ ಪ್ರಾರಂಭಿಕ ಸೂಚನೆಗಳನ್ನು ಕಾಣುತ್ತೀರಿ, ಧ್ಯಾನವು ತರುವ ಶಾಂತಿ ಹಾಗೂ ಭಗವಂತನೊಡನೆಯ ಸಂಸರ್ಗವನ್ನು ಮನಗಾಣಲು ನೀವು ಅವುಗಳನ್ನು ಈಗಲೇ ಉಪಯೋಗಿಸಬಹುದು.
ಧ್ಯಾನದ ಪ್ರಾಥಮಿಕ ಅಂಶಗಳ ಬಗ್ಗೆ ಹೆಚ್ಚಿನ ಸೂಚನೆಗಳು
ಸರಿಯಾದ ಭಂಗಿ