ಕಾರ್ಯಕ್ರಮವನ್ನು ಕುರಿತು
ಭಾರತದಲ್ಲಿ ಅನಾದಿಕಾಲದಿಂದ ನಡೆಸುತ್ತಾ ಬಂದಿರುವ ಧಾರ್ಮಿಕ ಜಾತ್ರೆಗಳು ಕುಂಭ ಮೇಳಗಳೆಂದು ಹೆಸರುವಾಸಿಯಾಗಿವೆ; ಅವು ಜನಸ್ತೋಮದೆದುರು ನಿರಂತರವಾಗಿ ಆಧ್ಯಾತ್ಮಿಕ ಧ್ಯೇಯಗಳನ್ನು ಉಳಿಸಿಕೊಂಡು ಬಂದಿವೆ.
— ಪರಮಹಂಸ ಯೋಗಾನಂದ
ನಮ್ಮ ಪ್ರೀತಿಯ ಗುರುದೇವರ ಈ ಮಾತುಗಳಿಂದ ಪ್ರೇರಿತವಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್), ಕುಂಭ ಮೇಳಗಳ ಸಮಯದಲ್ಲಿ ಶಿಬಿರಗಳನ್ನು ಆಯೋಜಿಸುತ್ತ ಬಂದಿದೆ. ಅಂತೆಯೇ, ಮುಂದಿನ ವರ್ಷದ ಆರಂಭದಲ್ಲಿ ಪ್ರಯಾಗ್‌ರಾಜ್ (ಅಲಹಾಬಾದ್) ನಲ್ಲಿ ನಡೆಯಲಿರುವ ಕುಂಭದಲ್ಲಿ ವೈಎಸ್ಎಸ್ ಶಿಬಿರವನ್ನು ಸ್ಥಾಪಿಸಲು ನಾವು ಯೋಜಿಸುತ್ತಿದ್ದೇವೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತರಿಗೆ ಸ್ವಾಗತ.
ಶಿಬಿರವು ಜನವರಿ 10 ರಿಂದ ಫೆಬ್ರವರಿ 15, 2025 ರವರೆಗೆ ಕುಂಭ ಮೇಳದ ಮೈದಾನದಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಈ ಅವಧಿಯು ಪೌಷ್ ಪೂರ್ಣಿಮಾ (ಸೋಮವಾರ, ಜನವರಿ 13), ಮಕರ ಸಂಕ್ರಾಂತಿ (ಮಂಗಳವಾರ, ಜನವರಿ 14), ಮೌನಿ ಅಮವಾಸ್ಯೆ (ಬುಧವಾರ, ಜನವರಿ 29), ವಸಂತ ಪಂಚಮಿ (ಸೋಮವಾರ, ಫೆಬ್ರವರಿ 3), ಮತ್ತು ಮಾಘ ಪೂರ್ಣಿಮಾ (ಬುಧವಾರ, ಫೆಬ್ರವರಿ 12) ಇವುಗಳನ್ನು ಒಳಗೊಂಡಿರುತ್ತದೆ.
ಕುಂಭ ಮೇಳದಲ್ಲಿ ಶಿಬಿರದ ಅವಧಿಯುದ್ದಕ್ಕೂ ಭಕ್ತರ ವಾಸ್ತವ್ಯವನ್ನು ಶ್ರೀಮಂತಗೊಳಿಸಲು ವೈಎಸ್ಎಸ್ ಸನ್ಯಾಸಿಗಳು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇವುಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಮೂಹ ಧ್ಯಾನಗಳು, ಕೀರ್ತನೆಗಳು ಮತ್ತು ಸತ್ಸಂಗಗಳು ಸೇರಿರುತ್ತವೆ.
ಕಾರ್ಯಕ್ರಮದ ವಿವರಗಳು
ನೋಂದಣಿ ಶುಲ್ಕ ಪ್ರತಿ ವ್ಯಕ್ತಿಗೆ ₹ 2000.
ಶಿಬಿರದ ಸೌಲಭ್ಯಗಳು ಮುಖ್ಯವಾಗಿ ವೈಎಸ್ಎಸ್ ಭಕ್ತರಿಗೆಂದು ಉದ್ದೇಶಿಸಲಾಗಿದೆ. ಆದರೂ, ಹಿರಿಯ ಪೋಷಕರು ಮತ್ತು ಸಂಬಂಧಿಕರೂ ಕೂಡ ತೀರ್ಥಯಾತ್ರೆಗೆ ಬರಲು ಬಯಸಬಹುದು ಎಂದು ನಾವು ಅರಿತಿದ್ದೇವೆ. ಭೇಟಿ ನೀಡುವ ಗುಂಪಿನ ಭಾಗವಾಗಲು ನಿಮ್ಮ ಕುಟುಂಬದ ಸದಸ್ಯರು ಅಥವಾ ಆಪ್ತ ಸ್ನೇಹಿತರು/ಸಂಬಂಧಿಗಳಿಗೆ, ಆಸಕ್ತಿ ಇದ್ದರೆ, ಅವರಿಗೂ ಸ್ವಾಗತ.
ನೋಂದಣಿ ಪ್ರಕ್ರಿಯೆ ಈಗ ಆರಂಭವಾಗಿದೆ!
ಡಿವೋಟೀ ಪೋರ್ಟಲ್ ಮೂಲಕ ಆನ್‌ಲೈನ್ ನೋಂದಣಿ:
ತ್ವರಿತ ಮತ್ತು ಸುಲಭದ ನೋಂದಣಿಗಾಗಿ, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿ.
ವೈಎಸ್‌ಎಸ್ ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೋಂದಣಿ:
ದಯವಿಟ್ಟು (0651) 6655 506 ಗೆ ಕರೆ ಮಾಡಿ ಅಥವಾ ರಾಂಚಿ ಆಶ್ರಮ ಸಹಾಯವಾಣಿಗೆ ಇಮೇಲ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಒದಗಿಸಿ:
- ನಿಮ್ಮ ಪೂರ್ಣ ಹೆಸರು
- ವಯಸ್ಸು
- ಲಿಂಗ
- ವಿಳಾಸ
- ಇಮೇಲ್
- ಫೋನ್ ನಂಬರ್
- ವೈಎಸ್‌ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್‌ಆರ್‌ಎಫ್ ಸದಸ್ಯತ್ವದ ಸಂಖ್ಯೆ)
- ನಿಮ್ಮ ಗುಂಪಿನಲ್ಲಿರುವ ಇತರ ಸದಸ್ಯರ (ಯಾರಾದರೂ ಇದ್ದರೆ) ಪೂರ್ಣ ಹೆಸರು, ವಯಸ್ಸು ಮತ್ತು ಲಿಂಗ ಮತ್ತು ಅವರು ನಿಮಗೆ ಹೇಗೆ ಸಂಬಂಧಿಸಿದ್ದಾರೆ ಎಂಬ ವಿವರಗಳು
- ನಿಮ್ಮ ಉದ್ದೇಶಿತ ಆಗಮನ ಮತ್ತು ನಿರ್ಗಮನದ ದಿನಾಂಕಗಳು (ದಯವಿಟ್ಟು ನಿಮ್ಮ ಆಗಮನ ಮತ್ತು ನಿರ್ಗಮನದ ಎರಡು ಆದ್ಯತೆಗಳನ್ನು ಸೂಚಿಸಿ)
ನಿಮ್ಮ ಮೊಬೈಲ್‌ಗೆ ಅಥವಾ ಇಮೇಲ್‌ಗೆ ಕಳುಹಿಸಲಾಗುವ ಪಾವತಿ ಲಿಂಕ್‌ಗೆ ನೀವು ಹಣವನ್ನು ಕಳಿಸಬಹುದು. ನಿಮ್ಮ ಮೊದಲ ಆದ್ಯತೆಯ ದಿನಾಂಕಗಳಿಗೆ ಭಾರೀ ಬೇಡಿಕೆ ಇದ್ದಲ್ಲಿ ಪರ್ಯಾಯ ದಿನಾಂಕಗಳನ್ನು ನಿಮಗೆ ಕೊಡಬಹುದು. ನಿಮ್ಮ ಮೊದಲ ಆದ್ಯತೆಗೇ ಮನ್ನಣೆ ನೀಡಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ನಿಮ್ಮ ವಸತಿ ಸೌಕರ್ಯವನ್ನು ನಾವು ಇಮೇಲ್/ಎಸ್‌ಎಮ್‌ಎಸ್ ಮೂಲಕ ಖಚಿತಪಡಿಸುತ್ತೇವೆ. ಕುಂಭ ಮೇಳ ಶಿಬಿರಕ್ಕೆ ನೀವು ಅದನ್ನು ತರಬೇಕಾಗುತ್ತದೆ.
ಎಸ್‌ಆರ್‌ಎಫ್ ಭಕ್ತರ ನೋಂದಣಿ:
ಎಸ್‌ಆರ್‌ಎಫ್ ಭಕ್ತರು ನೋಂದಾಯಿಸಿಕೊಳ್ಳಲು, ಶಿಬಿರದಲ್ಲಿ ವೈಎಸ್‌ಎಸ್ ಆಯೋಜಿಸಿದ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಊಟದಲ್ಲಿ ಪಾಲ್ಗೊಳ್ಳಲು ಸ್ವಾಗತ. ಶಿಬಿರದಲ್ಲಿ ವಸತಿ ವ್ಯವಸ್ಥೆಗಳು ಸರಳವಾಗಿರುವುದರಿಂದ, ಅವರು ಹತ್ತಿರದ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ನಾವು ಸೂಚಿಸುತ್ತೇವೆ; ಆದರೂ, ಅವರು ವೈಎಸ್‌ಎಸ್ ಶಿಬಿರದಲ್ಲಿ ಇರಬಯಸಿದರೆ, ನಾವು ಅವರಿಗೆ ಅವಕಾಶ ಕಲ್ಪಿಸಿಕೊಡುತ್ತೇವೆ.
ನೋಂದಾಯಿಸಿಕೊಳ್ಳಲು, ದಯವಿಟ್ಟು ವೈಎಸ್‌ಎಸ್ ಸಹಾಯವಾಣಿಯನ್ನು ಇಮೇಲ್ ಮೂಲಕ ಸಂಪರ್ಕಿಸಿ ಹಾಗೂ ಮೇಲೆ ತಿಳಿಸಿದಂತೆ ನಿಮ್ಮ ಎಲ್ಲಾ ವಿವರಗಳನ್ನು ಒದಗಿಸಿ. ಭಾರೀ ಬೇಡಿಕೆ ಇದ್ದಲ್ಲಿ ನಿಮಗೆ ಪರ್ಯಾಯ ದಿನಾಂಕಗಳನ್ನು ನಿಗದಿಪಡಿಸಬಹುದು. ಆದ್ದರಿಂದ ದಯವಿಟ್ಟು ನಿಮ್ಮ ಪ್ರಯಾಣ ಯೋಜನೆಯ ಎರಡು ಬೇರೆ ಬೇರೆ ಆದ್ಯತೆಗಳನ್ನು ನೀಡಿ.
ದಯವಿಟ್ಟು ಗಮನಿಸಿ:
- ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ: ವಸತಿ ಸೌಲಭ್ಯಗಳು ಸೀಮಿತವಾಗಿರುವ ಕಾರಣ, ವಸತಿ ಅಗತ್ಯವಿರುವ ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ದೃಢೀಕರಿಸಲಾಗುತ್ತದೆ.
- ಶಿಬಿರದಲ್ಲಿ ಸೌಲಭ್ಯಗಳು ಸೀಮಿತವಾಗಿರುವುದರಿಂದ, ಯಾರ ವಾಸ್ತವ್ಯವನ್ನು ವೈಎಸ್‌ಎಸ್‌ನಿಂದ ದೃಢಪಡಿಸಲಾಗಿರುವುದೋ ಅವರಿಗೆ ಮಾತ್ರ ಶಿಬಿರದಲ್ಲಿ ಉಳಿದುಕೊಳ್ಳಲು ಅನುಮತಿ ನೀಡಲಾಗುತ್ತದೆ. ಅಂತಹ ದೃಢೀಕರಣವನ್ನು ಹೊಂದಿರದ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ನಿಮ್ಮೊಂದಿಗೆ ಕರೆತರದಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ.
- ನಿಮ್ಮ ನೋಂದಣಿ ದೃಢೀಕರಣವಾದ ನಂತರ ನಿಮಗೆ ಭಾಗವಹಿಸಲು ಸಾಧ್ಯವಾಗದಿದ್ದರೆ, ನೋಂದಣಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.
ಸೀಮಿತ ಸೌಲಭ್ಯಗಳನ್ನು ಗರಿಷ್ಠ ಸಂಖ್ಯೆಯ ಭಕ್ತರು ತಮ್ಮ ಸ್ನಾನ ಮತ್ತು ಇತರ ಅನುಷ್ಠಾನಗಳನ್ನು ಪೂರೈಸಲು ಬಳಸಿಕೊಳ್ಳಲು ಸಾಧ್ಯವಾಗಲೆಂದು, ವೈಎಸ್‌ಎಸ್ ಶಿಬಿರದಲ್ಲಿ ಆಗಮನ ಮತ್ತು ನಿರ್ಗಮನದ ದಿನಗಳು ಸೇರಿದಂತೆ, ವಾಸ್ತವ್ಯವು ನಾಲ್ಕು ಹಗಲುಗಳು ಮತ್ತು ಮೂರು ರಾತ್ರಿಗಳಿಗೆ ಸೀಮಿತವಾಗಿರುತ್ತದೆ.
ಶಿಬಿರದಲ್ಲಿ ವಸತಿಗಾಗಿ, ಮರಳಿನ ಮೇಲೆ ಹಾಕಲಾದ ಟೆಂಟ್‌ಗಳಿರುತ್ತವೆ, ಅಲ್ಲಿ ನೆಲವನ್ನು ಒಣಹುಲ್ಲಿನಿಂದ ಮುಚ್ಚಿ, ಅದರ ಮೇಲೆ ಟಾರ್ಪಾಲಿನ್ ಹಾಕಲಾಗಿರುತ್ತದೆ.
- ಹಾಸಿಗೆಗಳು, ದಿಂಬುಗಳು ಮತ್ತು ಹೊದಿಕೆಗಳನ್ನು ಒದಗಿಸಲಾಗುವುದು, ಆದರೆ ದಯವಿಟ್ಟು ನಿಮ್ಮದೇ ಬೆಡ್‌ಶೀಟ್‌ಗಳು, ದಿಂಬಿನ ಕವರ್‌ಗಳು ಮತ್ತು ಸ್ಲೀಪಿಂಗ್ ಬ್ಯಾಗ್‌ಗಳನ್ನು ತನ್ನಿ.
- ಜನವರಿ ಮತ್ತು ಫೆಬ್ರವರಿಯಲ್ಲಿ ಹವಾಮಾನವು ತುಂಬಾ ಚಳಿಯಾಗಿರುತ್ತದೆ, ಆದ್ದರಿಂದ ಕ್ವಿಲ್ಟ್, ಸ್ಲೀಪಿಂಗ್ ಬ್ಯಾಗ್, ಸ್ವೆಟರ್, ಟೋಪಿ ಮತ್ತು ಕಾಲುಚೀಲಗಳಂತಹ ಚಳಿಗಾಲದ ಬಟ್ಟೆಗಳನ್ನು ತರಲು ಮರೆಯದಿರಿ. ಈ ತಿಂಗಳುಗಳಲ್ಲಿ ಯಾವಾಗಲಾದರೊಮ್ಮೆ ಮಳೆ ಬರುವ ಸಾಧ್ಯತೆ ಇರುವುದರಿಂದ ರೈನ್‌ಕೋಟ್ ಅಥವಾ ಛತ್ರಿ, ಸೊಳ್ಳೆ ನಿವಾರಕ ಕ್ರೀಮ್, ಟಾರ್ಚ್, ಆಸನ ಮತ್ತು ವೈಯಕ್ತಿಕ ಬಳಕೆಯ ಇತರ ವಸ್ತುಗಳನ್ನು ನೀವು ತರಲು ಬಯಸಬಹುದು.
ಊಟಕ್ಕೆ ಪ್ರತ್ಯೇಕ ಶುಲ್ಕವಿರುವುದಿಲ್ಲ.
ದಯವಿಟ್ಟು ಗಮನಿಸಿ: ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಟೆಂಟ್‌ಗಳಲ್ಲಿ ವಸತಿ ಸೌಕರ್ಯವನ್ನು ಒದಗಿಸಲಾಗುವುದು, ಆದ್ದರಿಂದ ಕುಟುಂಬಗಳು ಅದಕ್ಕನುಗುಣವಾಗಿ ಪ್ಯಾಕ್ ಮಾಡಿಕೊಳ್ಳಬೇಕಾಗಿ ವಿನಂತಿ.
ಕುಂಭ ಮೇಳದಲ್ಲಿ ವೈಎಸ್ಎಸ್ ಶಿಬಿರದ ವಿಳಾಸ
ಭಾಗವಹಿಸುವ ಸಂಸ್ಥೆಗಳಿಗೆ ಮೇಳದ ಅಧಿಕಾರಿಗಳು ಇನ್ನೂ ಶಿಬಿರದ ಸ್ಥಳಗಳನ್ನು ಮಂಜೂರು ಮಾಡಿರುವುದಿಲ್ಲ. ಸ್ಥಳದ ವಿವರಗಳು ಮತ್ತು ಮಾರ್ಗದ ನಕ್ಷೆ ಲಭ್ಯವಾದಾಗ ನಾವು ಅವುಗಳನ್ನು ಪೋಸ್ಟ್ ಮಾಡುತ್ತೇವೆ.
ನೋಂದಾಯಿಸಿಕೊಂಡವರೆಲ್ಲರಿಗೆ ಸ್ಥಳದ ವಿಳಾಸ ಮತ್ತು ಮಾರ್ಗ ನಕ್ಷೆಯನ್ನು ಇಮೇಲ್/ಎಸ್‌ಎಮ್‌ಎಸ್ ಮೂಲಕವೂ ಕಳುಹಿಸಲಾಗುತ್ತದೆ.
ಬೇಸ್ ಕ್ಯಾಂಪ್ ವಿಳಾಸ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಪ್ರಯಾಗ್‌ರಾಜ್
468/270, ನೈ ಬಸ್ತಿ ಸೊಹಬತಿಯಾ ಬಾಘ್,
ಪ್ರಯಾಗ್‌ರಾಜ್ (ಅಲಹಾಬಾದ್),
ಉತ್ತರ ಪ್ರದೇಶ – 211006
ಫೋನ್: 9454066330, 9415369314, 9936691302
ಇಮೇಲ್: prayagraj@ysscenters.org
ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕ ವಿವರಗಳು
ಯೋಗದಾ ಸತ್ಸಂಗ ಶಾಖಾ ಮಠ – ರಾಂಚಿ
ಪರಮಹಂಸ ಯೋಗಾನಂದ ಪಥ
ರಾಂಚಿ – 834001
ಜಾರ್ಖಂಡ್
ಫೋನ್: (0651) 6655 506
(ಸೋಮ-ಶನಿ, ಬೆಳಗ್ಗೆ 09:30 – ಸಂಜೆ 04:30)
ಇಮೇಲ್: kumbha@yssi.org