ವೈ. ಎಸ್. ಎಸ್. ಭಕ್ತರು ನಿರ್ವಹಿಸುತ್ತಿರುವ ಧ್ಯಾನ ಪ್ರಕ್ರಿಯೆಗಳು
(ಇಂಗ್ಲೀಷ್‌ ಹಾಗೂ ಭಾರತದ ಇನ್ನಿತರ ಭಾಷೆಗಳಲ್ಲಿ)

ಕಾರ್ಯಕ್ರಮದ ಬಗ್ಗೆ

ಸನ್ಯಾಸಿಗಳು ನಿರ್ವಹಿಸುತ್ತಿರುವ ಧ್ಯಾನದ ಜೊತೆಗೆ ,ವೈ. ಎಸ್. ಎಸ್. ಭಕ್ತರಿಂದ ನಿರ್ವಹಿಸುವ ಧ್ಯಾನಗಳನ್ನು, ನಮ್ಮ ವಾರದ ಕ್ಯಾಲೆಂಡರ್‌ ನಲ್ಲಿ ನಾವು ಅವಕಾಶ ನೀಡುತ್ತೇವೆ.

ದಯಮಾಡಿ ಗಮನಿಸಿ: ಸೋಮವಾರ, ಮೇ 6 ರಿಂದ ಮೊದಲುಗೊಂಡು ಹೆಚ್ಚುವರಿಯಾಗಿ ಭಕ್ತರಿಂದ ನಿರ್ದೇಶಿತ ಸುಧೀರ್ಘ ಧ್ಯಾನ, ಸೋಮವಾರದಂದು ಹಿಂದಿಯಲ್ಲಿ ಸಂಜೆ 5:30 ರಿಂದ ರಾತ್ರಿ 7.30 ರವರೆಗೆ (ಭಾರತೀಯ ಕಾಲಮಾನ) ಸೇರಿಸಲಾಗಿದೆ.

ಸಂಜೆ 5:10 ರಿಂದ ರಾತ್ರಿ 7:30 ರವರೆಗೆ (ಹಿಂದಿ)

ಪ್ರತಿ ಸೋಮವಾರ

ವೇಳಾಪಟ್ಟಿ

ಬೆಳಗಿನ ಧ್ಯಾನ

ಬೆಳಗ್ಗೆ 6:40 – 8:00 ರವರೆಗೆ (ಇಂಗ್ಲೀಷ್)

ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳು

ಬೆಳಗ್ಗೆ 6:40 – 8:00 ರವರೆಗೆ (ಹಿಂದಿ)

ಭಾನುವಾರ ಹೊರತು ಪಡಿಸಿ ಬಾಕಿ ಎಲ್ಲ ದಿನಗಳು

ಸಂಜೆಯ ಧ್ಯಾನ

ಸಂಜೆ 5:10 – 6:30 ರವರೆಗೆ (ಹಿಂದಿ)

ಮಂಗಳವಾರ ಹೊರತು ಪಡಿಸಿ ಬಾಕಿ ಎಲ್ಲಾ ದಿನಗಳು

ಸಂಜೆ 6:10 – 7:30 ರವರೆಗೆ (ಇಂಗ್ಲಿಷ್)

ಮಂಗಳವಾರ ಮತ್ತು ಬುಧವಾರ ಹೊರತು ಪಡಿಸಿ

ಸಂಜೆ 6:10 – 7:30 ರವರೆಗೆ (ತೆಲುಗು)

ಪ್ರತಿ ತಿಂಗಳ ಮೊದಲನೆಯ ಹಾಗೂ ಮೂರನೆಯ ಶುಕ್ರವಾರ

ಸಂಜೆ 6:10 – 7:30 ರವರೆಗೆ (ತಮಿಳು)

ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಸೋಮವಾರ

ಸಂಜೆ 6:10 – 7:30 ರವರೆಗೆ (ಕನ್ನಡ)

ಪ್ರತಿ ಬುಧವಾರ

ಸಂಜೆ 6:10 – 7:30 ರವರೆಗೆ (ಬಂಗಾಳಿ)

ಪ್ರತಿ ತಿಂಗಳು ಎರಡನೆಯ ಹಾಗೂ ನಾಲ್ಕನೆಯ ಸೋಮವಾರಗಳಂದು

ಸಂಜೆ 5:10 ರಿಂದ ರಾತ್ರಿ 7:30 ರವರೆಗೆ (ಹಿಂದಿ)
(ಸುಧೀರ್ಘ ಧ್ಯಾನ)

ಪ್ರತಿ ಸೋಮವಾರ

ಸಂಜೆ 6:10 – 8:30 ರವರೆಗೆ (ಇಂಗ್ಲಿಷ್)
(ಸುಧೀರ್ಘ ಧ್ಯಾನ)

ಪ್ರತಿ ಬುಧವಾರ

ಪ್ರತಿ ಧ್ಯಾನ ಪ್ರಕ್ರಿಯೆ ಗುಂಪಿನ ಚೈತನ್ಯದಾಯಕ ವ್ಯಾಯಾಮಗಳ ಅಭ್ಯಾಸದೊಂದಿಗೆ ಪ್ರಾರಂಭಗೊಳ್ಳುತ್ತದೆ. ತದನಂತರ ಪ್ರಾರಂಭಿಕ ಪ್ರಾರ್ಥನೆ, ಆಧ್ಯಾತ್ಮಿಕ ದಿನಚರಿಯಿಂದ ಓದುವಿಕೆ, ದಿವ್ಯಗೀತೆಯ ಗಾಯನ ಹಾಗೂ ಧ್ಯಾನದ ಅವಧಿ ಇರುತ್ತದೆ. ಮುಕ್ತಾಯದ ಮೊದಲು ಪರಮಹಂಸ ಯೋಗಾನಂದರು ಬೋಧಿಸಿರುವ ಉಪಶಮನದಾಯಕ ತಂತ್ರದ ಅಭ್ಯಾಸ ಹಾಗೂ ಮುಕ್ತಾಯದ ಪ್ರಾರ್ಥನೆ ಇರುತ್ತದೆ. ಈ ಧ್ಯಾನ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಅಂಶವೆಂದರೆ, ದಿವ್ಯಗೀತೆಯ ಗಾಯನ ಇಂಗ್ಲಿಷನಲ್ಲಿ ಹಾಗೂ ಯಾವ ಭಾಷೆಯಲ್ಲಿ ಧ್ಯಾನವನ್ನು ನಿರ್ವಹಿಸಲಾಗುತ್ತಿದೆಯೋ, ಆಯಾ ಭಾಷೆಯಲ್ಲಿ ಇರುತ್ತದೆ.

ಬುಧವಾರ ಸಂಜೆ ನಡೆಯುವ ದೀರ್ಘಕಾಲೀನ ಧ್ಯಾನದ ವಿಧಾನ:

ಸುಧೀರ್ಘ ಧ್ಯಾನವು ಚೈತನ್ಯ ದಾಯಕ ವ್ಯಾಯಾಮಗಳ ಸಾಮೂಹಿಕ ಅಭ್ಯಾಸದಿಂದ ಆರಂಭಗೊಂಡು, ಒಂದು ಪ್ರಾರಂಭಿಕ ಪ್ರಾರ್ಥನೆ,ಸ್ಪೂರ್ತಿದಾಯಕ ಓದುಗಳು ,ಭಕ್ತಿ ಗಾಯನ ಮತ್ತು ಸುಮಾರು 30 ರಿಂದ 50 ನಿಮಿಷಗಳ ಎರಡು ಅವಧಿಗಳ ಮೌನ ಧ್ಯಾನಗಳನ್ನು ಒಳಗೊಂಡಿರುತ್ತವೆ. ಪರಮಹಂಸ ಯೋಗಾನಂದರ ಉಪಶಮನದಾಯಕ ತಂತ್ರದ ಅಭ್ಯಾಸ ಹಾಗೂ ಮುಕ್ತಾಯದ ಪ್ರಾರ್ಥನೆಯೊಂದಿಗೆ, ಧ್ಯಾನ ಪ್ರಕ್ರಿಯೆ ಕೊನೆಗೊಳ್ಳುತ್ತದೆ.

ಗಮನದಲ್ಲಿಟ್ಟುಕೊಳ್ಳ ಬೇಕಾದ ಅಂಶವೆಂದರೆ, ಸನ್ಯಾಸಿಗಳಿಂದ ನಿರ್ವಹಿಸಲ್ಪಡುವ ವಿಶೇಷ ಧ್ಯಾನ ಕಾರ್ಯಕ್ರಮಗಳು ಇರುವಾಗ, ಈ ಆನ್ಲೈನ ಧ್ಯಾನಗಳನ್ನು ನಡೆಸಲಾಗುವುದಿಲ್ಲ.

ನೀವು ಆನ್ಲೈನ್‌ ಧ್ಯಾನ ಕೇಂದ್ರಕ್ಕೆ ಅಪರಿಚಿತರಾಗಿದ್ದಲ್ಲಿ “ಆನ್ಲೈನ ಧ್ಯಾನ ಕೇಂದ್ರದಲ್ಲಿ ಹೇಗೆ ಭಾಗವಹಿಸುವುದು“ಕ್ಕೆ, ದಯಮಾಡಿ ಸಂದರ್ಶಿಸಿ.

ನೂತನ ಅತಿಥಿ

ಪರಮಹಂಸ ಯೋಗಾನಂದರ ಬಗ್ಗೆಯೂ ಅವರ ಉಪದೇಶಗಳ ಬಗ್ಗೆಯೂ ತಿಳಿಯಲು ಕೆಳಗಿನ ಲಿಂಕ್ ಗಳನ್ನು ನೋಡಿಕೊಳ್ಳಿ:

ಇದನ್ನು ಹಂಚಿಕೊಳ್ಳಿ