ಆಧ್ಯಾತ್ಮಿಕ ಜೀವನ ಕಲೆ

Paramahansa Yogananda lessons on meditation and spiritual living

ಭೂಮಿಯ ಮೇಲೆ ನಮ್ಮ ಬದುಕಿನ ನೈಜ ಉದ್ದೇಶವೇನು?

ಯುಗಯುಗಾಂತರಗಳಿಂದ, ಅನುಭಾವಿಗಳು, ಸಂತರು, ಋಷಿಗಳು ಮತ್ತು ಯೋಗಿಗಳು ನಮಗೆ ಅದೇ ಉತ್ತರವನ್ನು ನೀಡಿದ್ದಾರೆ: ಭಗವಂತನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಲು — ನಮ್ಮ ದೈನಂದಿನ ಜೀವನದಲ್ಲಿ ಅಮೂರ್ತಚೇತನದೊಂದಿಗೆ ನಮ್ಮನ್ನು ಸಂಪರ್ಕಿಸುವಂತಹುದು. ಆಧ್ಯಾತ್ಮಿಕ ಜೀವನವು ಆ ಸಂಬಂಧವನ್ನು ವೃದ್ಧಿಸಿಕೊಳ್ಳುವ ಪ್ರಾಯೋಗಿಕ ವಿಧಾನವಾಗಿದೆ.

“ಆತ್ಮ-ಸಾಕ್ಷಾತ್ಕಾರವೆಂದರೆ ಶರೀರದಲ್ಲಿ, ಮನಸ್ಸಿನಲ್ಲಿ ಮತ್ತು ಆತ್ಮನಲ್ಲಿ ನಾವು ಸರ್ವವ್ಯಾಪಕನಾದ ಪರಮಾತ್ಮನಲ್ಲಿ ಅನನ್ಯವಾಗಿ ಒಂದಾಗಿದ್ದೇವೆಂದು ಅರಿಯುವುದು; ಅದು ನಮಗೆ ಪ್ರಾಪ್ತವಾಗಲೆಂದು ಪ್ರಾರ್ಥಿಸಕೊಳ್ಳಬೇಕಾಗಿಲ್ಲ, ನಾವು ನಿರಂತರವಾಗಿ ಅದರ ಸನ್ನಿಧಿಯಲ್ಲಿರುವುದಲ್ಲದೇ ಪರಮಾತ್ಮನ ಸರ್ವವ್ಯಾಪಕತ್ವವೇ ನಮ್ಮ ಸರ್ವವ್ಯಾಪಕತ್ವ, ಮತ್ತು ನಾವು ಅವನ ಅಂಶವಾಗಿರುವುದು ಕೇವಲ ಈಗ ಮಾತ್ರವಲ್ಲ, ನಿರಂತರವೂ ಅದೇ ಆಗಿರುತ್ತೇವೆ ಎಂದು ಅರಿಯುವುದು. ನಾವು ಮಾಡಬೇಕಾದುದೆಲ್ಲ ಹಾಗೆ ಅರಿಯುವ ಸಾಧನಗಳನ್ನು ಸದುಪಯೋಗ ಪಡಿಸಿಕೊಳ್ಳುವುದೇ ಆಗಿದೆ.”

— ಶ್ರೀ ಶ್ರೀ ಪರಮಹಂಸ ಯೋಗಾನಂದ

ನಾವು ಹುಡುಕುತ್ತಿರುವ ಎಲ್ಲಾ ಜ್ಞಾನ, ಸೃಜನಶೀಲತೆ, ಸಂತೋಷ ಮತ್ತು ಸುರಕ್ಷತೆಯು ನಮ್ಮೊಳಗೆ ಅಡಕವಾಗಿದೆ, ನಮ್ಮ ಅಸ್ತಿತ್ವದ ಮೂಲವೇ ಆಗಿದೆ ಎಂದು ಪರಮಹಂಸ ಯೋಗಾನಂದರು ತೋರಿಸಿಕೊಟ್ಟಿದ್ದಾರೆ.

ಇದನ್ನು ಸಂಪೂರ್ಣವಾಗಿ ಅರಿತುಕೊಳ್ಳಲು — ಕೇವಲ ಬೌದ್ಧಿಕ ತತ್ತ್ವಶಾಸ್ತ್ರವಾಗಿ ಮಾತ್ರವಲ್ಲದೆ ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಶಕ್ತಿ ಮತ್ತು ತಿಳುವಳಿಕೆಯನ್ನು ತರುವ ನಿಜವಾದ ಅನುಭವವನ್ನಾಗಿಸುವುದೇ — ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ಒಟ್ಟು ಕ್ರಿಯಾ ಯೋಗ ಬೋಧನೆಗಳ ಸಾರ.

ದೇಹ, ಮನಸ್ಸು ಮತ್ತು ಆತ್ಮಗಳಲ್ಲಿ ಸಮತೋಲನ ಮತ್ತು ಸಾಮರಸ್ಯ

Devotees praying and meditatingನಾವು ಕಲಿಸುವ ಸಮತೋಲಿತ ಜೀವನಶೈಲಿ ಮತ್ತು ಧ್ಯಾನಾಭ್ಯಾಸಗಳು ದೇಹ, ಮನಸ್ಸು ಮತ್ತು ಆತ್ಮಗಳ ಪರಸ್ಪರ ಸಂಬಂಧದ ಅರಿವನ್ನು ಆಧರಿಸಿವೆ. ಅವು ನಮ್ಮ ಸ್ವಭಾವದ ಈ ಎಲ್ಲಾ ಅಂಶಗಳನ್ನು ಬಲಪಡಿಸಲು, ಸಮತೋಲನಗೊಳಿಸಲು ಮತ್ತು ಸುಸ್ಥಿತಿಯಲ್ಲಿಡಲು ವಿನ್ಯಾಸಗೊಳಿಸಲಾದ ಸಮಗ್ರ ವ್ಯವಸ್ಥೆಯಾಗಿವೆ.

ಈ ಬೋಧನೆಗಳು ವ್ಯಕ್ತಿಯೊಬ್ಬರ ಆಳವಾದ ಅಭ್ಯಾಸಕ್ಕೆ ಅನುಗುಣವಾಗಿ ಅವರ ಜೀವನದ ಹಾದಿಯಲ್ಲಿ ಬರುವ ಯಾವುದೇ ವಿಷಯಗಳಲ್ಲಿ ಅವರು ಜಯಶಾಲಿಯಾಗಲು ಅಗತ್ಯವಾದ ಸಾಧನಗಳನ್ನು ನೀಡುವುದರ ಜೊತೆ ಅಂತಿಮ ಸತ್ಯದ (ಭಗವಂತನ) ಕುರಿತು ಆಳವಾದ ತಿಳುವಳಿಕೆ ಮತ್ತು ಅನುಭವವನ್ನು ಒದಗಿಸುತ್ತವೆ.

ನಮ್ಮ ಭಾರತ ಉಪಖಂಡದಲ್ಲಿ (ಮತ್ತು ಎಸ್‌ಆರ್‌ಎಫ್‌ ಮೂಲಕ ಪ್ರಪಂಚದ ಉಳಿದ ಭಾಗಗಳಲ್ಲಿ) ಧ್ಯಾನಿಗಳ ಮತ್ತು ಆಧ್ಯಾತ್ಮಿಕ ಅನ್ವೇಷಕರ ಸಮುದಾಯದಲ್ಲಿ ಸಹಕಾರ ಮತ್ತು ಸಹಭಾಗಿತ್ವವನ್ನು ಕಂಡುಕೊಳ್ಳಿ.

ಆತ್ಮಸಾಕ್ಷಾತ್ಕಾರವನ್ನು ಅರಸುತ್ತಿರುವ ಎಲ್ಲರಿಗೂ ಪರಮಹಂಸ ಯೋಗಾನಂದರು ಒದಗಿಸಿದ ಸ್ಫೂರ್ತಿ ಮತ್ತು ಸಾಧನೆ (ಆಧ್ಯಾತ್ಮಿಕ ಅಭ್ಯಾಸ ಮತ್ತು ಶಿಸ್ತಿನ ಮಾರ್ಗ) ಯನ್ನು ಪರಿಶೋಧಿಸಲು ಕೆಳಗಿನ ಪಟ್ಟಿಯಿಂದ ಆರಿಸಿಕೊಳ್ಳಿ, ಅಥವಾ…

ಕೆಳಗಿನ ಆಯ್ಕೆಗಳನ್ನು ನೋಡಿ:

ಇದನ್ನು ಹಂಚಿಕೊಳ್ಳಿ