"ಭಗವಂತನೊಂದಿಗಿನ ಏಕಾಂತತೆ, ನಿಮ್ಮ ಮನಸ್ಸು, ಶರೀರ ಹಾಗೂ ಆತ್ಮಕ್ಕೆ ಏನು ಮಾಡುತ್ತದೆ ಎಂಬುದು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಮೌನದ ದ್ವಾರಗಳ ಮೂಲಕ ಜ್ಞಾನ ಹಾಗೂ ಶಾಂತಿಯ ಉಪಶಮನಕಾರಕ ಸೂರ್ಯನು ನಿಮ್ಮ ಮೇಲೆ ಪ್ರಕಾಶಿಸುತ್ತಾನೆ.”

—ಶ್ರೀ ಶ್ರೀ ಪರಮಹಂಸ ಯೋಗಾನಂದ

ವೈಎಸ್‌ಎಸ್‌ ಧ್ಯಾನದ ಶಿಬಿರಗಳು ಮತ್ತು ಬದುಕುವುದು ಹೇಗೆ ಶಿಬಿರದ ಕಾರ್ಯಕ್ರಮಗಳು

ಬದುಕುವುದು ಹೇಗೆ ಶಿಬಿರ, ರಾಂಚಿ

ಆಧ್ಯಾತ್ಮಿಕ ಪುನರುಜ್ಜೀವನ ಬಯಸುವವರಿಗೆ ಹಾಗೂ ನಿತ್ಯಜೀವನದ ಒತ್ತಡಗಳನ್ನು ಹಿಂದಿಕ್ಕಬಯಸುವವರಿಗೆ – ಕೇವಲ ಕೆಲವೇ ದಿನಗಳ ಮಟ್ಟಿಗಾದರೂ – ಭಗವಂತನ ಆಳವಾದ ಗ್ರಹಿಕೆಯನ್ನು ಹೊಂದಲು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಬದುಕುವುದು-ಹೇಗೆ ಶಿಬಿರದ ಕಾರ್ಯಕ್ರಮಗಳು ರೂಪುಗೊಂಡಿವೆ. ಪರಮಹಂಸ ಯೋಗಾನಂದರ ನುಡಿಯಂತೆ ಪ್ರತಿದಿನದ ಧ್ಯಾನದ ಶಿಬಿರದ ಕಾರ್ಯಕ್ರಮಗಳು, “ಭಗವಂತನಿಂದ ಪುನಶ್ಚೇತನಗೊಳ್ಳುವ ಏಕಮಾತ್ರ ಉದ್ದೇಶದಿಂದ [ನೀವು] ಹೋಗಬಹುದಾದ ಮೌನದ ಡೈನಮೋ.”

ಧ್ಯಾನದ ಶಿಬಿರದ ಕಾರ್ಯಕಲಾಪಗಳು

ಇಗತ್ಪುರಿ ಧ್ಯಾನದ ಶಿಬಿರಧ್ಯಾನದ ಶಿಬಿರದ ಕಾರ್ಯಕಲಾಪಗಳಲ್ಲಿ ಪ್ರತಿದಿನ ಸಮೂಹ ಧ್ಯಾನಗಳು, ವೈಎಸ್‌ಎಸ್‌ ಚೈತನ್ಯದಾಯಕ ವ್ಯಾಯಾಮಗಳ ಅಭ್ಯಾಸ, ಸ್ಫೂರ್ತಿದಾಯಕ ತರಗತಿಗಳು ಹಾಗೂ ಕಾರ್ಯಕ್ರಮಗಳು ಮತ್ತು ಗುರೂಜಿಯ ಬಗ್ಗೆ ಒಂದು ವೀಡಿಯೋ ಪ್ರದರ್ಶನ ಸೇರಿರುತ್ತವೆ. ಧ್ಯಾನದ ಶಿಬಿರದ ಮನೋಹರ ವಾತಾವರಣದಲ್ಲಿ ವಿಶ್ರಾಂತಿಯನ್ನು ಪಡೆಯಲು, ಭಗವಂತನ ಉಪಸ್ಥಿತಿಯನ್ನು ಆನಂದಿಸಲು ಸಾಕಷ್ಟು ಸಮಯಾವಕಾಶವಿರುತ್ತದೆ. ವೈಯಕ್ತಿಕ ಶ್ರವಣಕ್ಕೆ ಹಾಗೂ ಅಧ್ಯಯನಕ್ಕೆ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಪುಸ್ತಕಗಳು ಹಾಗೂ ಧ್ವನಿಮುದ್ರಿಕೆಗಳು ಲಭ್ಯವಿರುತ್ತವೆ ಮತ್ತು ಧ್ಯಾನಕ್ಕೆ ಶಿಬಿರದ ಧ್ಯಾನ ಮಂದಿರ ತೆರೆದಿರುತ್ತದೆ.

ವೈಎಸ್‌ಎಸ್‌ ಬೋಧನೆಗಳು ಹಾಗೂ ಧ್ಯಾನದ ತಂತ್ರಗಳ ಬಗ್ಗೆ ವೈಎಸ್‌ಎಸ್‌ ಸಂನ್ಯಾಸಿ ಶ್ರೇಣಿಯ ಸಂನ್ಯಾಸಿಗಳು ನಡೆಸಿಕೊಡುವ ವಾರಾಂತ್ಯದ ಧ್ಯಾನದ ಶಿಬಿರಗಳು ತರಗತಿಗಳ ಒಂದು ಕೇಂದ್ರೀಕೃತ ಕಾರ್ಯಕ್ರಮಗಳನ್ನು ಒದಗಿಸುತ್ತವೆ. ವೈಎಸ್‌ಎಸ್ ಧ್ಯಾನ ಶಿಬಿರ ಸೌಲಭ್ಯಗಳಲ್ಲಿ ಮತ್ತು ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಸಿಕೊಡಲಾಗುವ ಧ್ಯಾನಶಿಬಿರಗಳನ್ನು ವರ್ಷದುದ್ದಕ್ಕೂ ಹಲವು ವಾರಾಂತ್ಯಗಳಲ್ಲಿ ನಿಗದಿಪಡಿಸಲಾಗಿದೆ.

ಧ್ಯಾನದ ಶಿಬಿರದ ಅನುಭವದ ಪರಿಣಾಮಗಳ ತೀವ್ರತೆಯನ್ನು ಹೆಚ್ಚಿಸಲು, ಅತಿಥಿಗಳು ಧ್ಯಾನದ ಶಿಬಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಮತ್ತು ಅವರು ಅಲ್ಲಿರುವಾಗ ಬೇರೆ ಇನ್ನಾವುದೇ ಚಟುವಟಿಕೆಯಲ್ಲಿ ತೊಡಗದಿರುವುದನ್ನು ನಿರೀಕ್ಷಿಸಲಾಗುತ್ತದೆ.

ಈ ಧ್ಯಾನದ ಶಿಬಿರದ ಕಾರ್ಯಕ್ರಮಗಳು ಎಲ್ಲ ಭಕ್ತಾದಿಗಳಿಗೂ ಮುಕ್ತವಾಗಿ ತೆರೆದಿದೆ: ಪುರುಷರು, ಮಹಿಳೆಯರು ಮತ್ತು ವಿವಾಹಿತ ದಂಪತಿಗಳು. ಪುರುಷರಿಗೆ ಮತ್ತು ಮಹಿಳೆಯರಿಗೆ ತಂಗಲು ಪ್ರತ್ಯೇಕವಾದ ವ್ಯವಸ್ಥೆ ಮಾಡಿ ಕೊಡಲಾಗುತ್ತದೆ.

ಗುರುಗಳೊಡನೆ ಆಳವಾಗಿ ಶ್ರುತಿಗೂಡಲು ಮತ್ತು ತಮ್ಮ ಆಂತರಿಕ ಪರಿಸರವನ್ನು ಬೆಳೆಸಿಕೊಳ್ಳಲು ಶಿಬಿರಾರ್ಥಿಗಳು ಮೌನವನ್ನು ಪಾಲಿಸಬೇಕು ಎಂದು ಕೋರುತ್ತೇವೆ.

ಈ ಧ್ಯಾನದ ಶಿಬಿರದ ಕಾರ್ಯಕ್ರಮಗಳಲ್ಲಿ ನೀವು ಭಾಗವಹಿಸಬೇಕೆಂದು ಬಯಸಿದರೆ, ಕನಿಷ್ಠ ಒಂದು ತಿಂಗಳ ಮುಂಚೆ ನಿಮ್ಮ ಹೆಸರು, ವಿಳಾಸ, ಮೊಬೈಲ್‌ ನಂಬರ್‌, ಇ-ಮೇಲ್‌ ಐಡಿ, ಪಾಠಗಳ ನೋಂದಣಿ ಸಂಖ್ಯೆ, ವಯಸ್ಸು ಮತ್ತು ನಿಮ್ಮ ಸಂಭಾವ್ಯ ಬರುವ ಹಾಗೂ ಹೊರಡುವ ದಿನಾಂಕಗಳನ್ನು ದಯವಿಟ್ಟು ನೀವು ಹೋಗಬೇಕೆಂದಿರುವ ಆಶ್ರಮ/ಕೇಂದ್ರ/ಸಾಧನಾಲಯಕ್ಕೆ ತಿಳಿಸಬೇಕೆಂದು ಕೋರುತ್ತೇವೆ. ನಂತರ ನೀವು ನಿಮ್ಮ ನೋಂದಣಿಯ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. ನೋಂದಣಿ ಶುಲ್ಕವೇನಾದರೂ ಇದ್ದಲ್ಲಿ ಅದನ್ನು ನೀವು ಮುಂಚಿತವಾಗಿ ಪಾವತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಬಂಧಪಟ್ಟ ಆಶ್ರಮ/ಕೇಂದ್ರ/ಸಾಧನಾಲಯವನ್ನು ಸಂಪರ್ಕಿಸಿ.

ಗುರೂಜಿ ಹೇಳಿದ್ದಾರೆ: “ಎಲ್ಲ ಕರ್ತವ್ಯಗಳಿಗಿಂತಲೂ ಮಿಗಿಲಾದದ್ದು ಭಗವಂತನನ್ನು ನೆನಪಿನಲ್ಲಿಟ್ಟುಕೊಳ್ಳುವುದು. ಇಡೀ ದಿವಸ ಭಗವಂತನ ಪರಮಾನಂದದಿಂದ ತುಂಬಿರಲು, ಬೆಳಿಗ್ಗೆ ಮಾಡಬೇಕಾದ ಮೊದಲ ಕೆಲಸವೆಂದರೆ ಅವನ ಕುರಿತು ಧ್ಯಾನ ಮಾಡುವುದು ಮತ್ತು ಅವನ ಸೇವೆಗಾಗಿ ನಿಮ್ಮ ಬದುಕನ್ನು ಹೇಗೆ ಮೀಸಲಿಡುವುದು ಎಂದು ಆಲೋಚಿಸುವುದು.”

ಮುಂಬರುವ ಧ್ಯಾನದ ಶಿಬಿರಗಳು

ವೈಎಸ್‌ಎಸ್‌ ಸಂನ್ಯಾಸಿಗಳು ಜುಲೈ — ಡಿಸೆಂಬರ್‌ 2024ರಲ್ಲಿ ನಡೆಸುವ ಧ್ಯಾನದ ಶಿಬಿರದ ಕಾರ್ಯಕ್ರಮಗಳ ವಿವರಕ್ಕಾಗಿ ದಯವಿಟ್ಟು ಇಲ್ಲಿ ಒತ್ತಿ.

ವೈಎಸ್‌ಎಸ್‌ ಧ್ಯಾನದ ಶಿಬಿರಗಳು:

ಶಿಮ್ಲಾ ಧ್ಯಾನದ ಶಿಬಿರ ಧ್ಯಾನ ಕೇಂದ್ರ, ಹಿಮಾಚಲ ಪ್ರದೇಶ

ಯೋಗದಾ ಸತ್ಸಂಗ ಆನಂದ ಶಿಖರ ಸಾಧನಾಲಯ, ಶಿಮ್ಲಾ
ಬನೋಟಿ ಪಹಲ್‌ ರಸ್ತೆ
ಗ್ರಾಮ ಪಾಂತಿ, ಶಿಮ್ಲಾ 171011
ಹಿಮಾಚಲ ಪ್ರದೇಶ
ಮೊ: 9418638808, 9459051087
ಇ-ಮೇಲ್: shimla@ysscenters.org
ಹೇಗೆ ತಲುಪುವುದು

ಸಾಧನಾಲಯ, ಪುಣೆ

ಯೋಗದಾ ಸತ್ಸಂಗ ಸರೋವರ್‌ ಸಾಧನಾಲಯ – ಪುಣೆ
ಪನ್‌ಶೇಟ್‌ ಡ್ಯಾಂನಿಂದ 12ನೇ ಕಿ.ಮೀ. ಮೈಲಿಗಲ್ಲು,
ಪನ್‌ಶೇಟ್‌ ರಸ್ತೆ, ಖಾನಾಪುರ್‌ ಗ್ರಾಮ
ನಂದಮಹಲ್‌ ಎದುರು, ಶಾಂತಿವನ ವಿಹಾರಧಾಮದ ಮುಂದಿನ ನಿಲ್ದಾಣ
ಖಾನಾಪುರ ಗ್ರಾಮದಿಂದ 2.5 ಕಿ.ಮೀ. ಮುಂದೆ
ಪುಣೆ, ಮಹಾರಾಷ್ಟ್ರ – 411025
ಮೊ: 9730907093, 9881240512
ಇ-ಮೇಲ್: puneretreat@ysscenters.org
ಹೇಗೆ ತಲುಪುವುದು

ಸಾಧನಾಲಯ-ಧ್ಯಾನ ಕೇಂದ್ರ, ಇಗತ್‌ಪುರಿ, ನಾಸಿಕ್

ಪರಮಹಂಸ ಯೋಗಾನಂದ ಸಾಧನಾಲಯ, ಇಗತ್‌ಪುರಿ
ಪರಮಹಂಸ ಯೋಗಾನಂದ ಪಥ
ಯೋಗಾನಂದಪುರಂ
ಇಗತ್‌ಪುರಿ 422403
ಜಿಲ್ಲೆ ನಾಶಿಕ್‌, ಮಹಾರಾಷ್ಟ್ರ
ಮೊ: 9823459145, 8087618737
ಇ-ಮೇಲ್‌: igatpuri@ysscenters.org
ಹೇಗೆ ತಲುಪುವುದು

ಧ್ಯಾನ ದೇವಾಲಯ, ದಿಹಿಕಾ (ಅಸನ್ಸೋಲ್)

ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ದಿಹಿಕಾ
ದಾಮೋದರ್‌ ರೈಲ್ವೆ ಗೇಟ್‌ ಬಳಿ
ದಾಮೋದರ್
ಪೋ.ಆ. ಸುರ್ಜಾನಗರ್‌
ಜಿಲ್ಲೆ ಬರ್ದ್ವಾನ್‌ 713361
ಪಶ್ಚಿಮ ಬಂಗಾಳ
ಮೋ: 9163146565, 9163146566
ಇ-ಮೇಲ್‌: ysdk.dihika@gmail.com
ಹೇಗೆ ತಲುಪುವುದು

ಆಶ್ರಮ ಪುರಿ

ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ಪುರಿ
ಒಡಿಶಾ ಬೇಕರಿ ಬಳಿ
ವಾಟರ್‌ ವರ್ಕ್ಸ್‌ ರಸ್ತೆ
ಪುರಿ 752002
ಒಡಿಶಾ
ಮೊ: (06752) 233272, 9778373452
ಇ-ಮೇಲ್: ysdk.puri@gmail.com
ಹೇಗೆ ತಲುಪುವುದು

ಧ್ಯಾನ ಮಂದಿರ ಸೆರಾಂಪೋರ್, ಹೌರಾ

ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ಸಿರಾಂಪೂರ್‌
57, ನೇತಾಜಿ ಸುಭಾಷ್‌ ಅವೆನ್ಯೂ
ಸಿರಾಂಪೂರ್‌ 712201
ಜಿಲ್ಲೆ ಹೂಗ್ಲಿ
ಪಶ್ಚಿಮ ಬಂಗಾಳ
ಮೊ: (033) 26626615, 8420061454
ಇ-ಮೇಲ್‌: yssdak@yssi.org
ಹೇಗೆ ತಲುಪುವುದು

ಆಶ್ರಮ ತೆಲರಿ, ಪಶ್ಚಿಮ ಬಂಗಾಳ

ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ತೆಲಾರಿ
ಗ್ರಾಮ – ತೆಲಾರಿ
ಬಹಿರ್‌ಕುಂಜ 743318
ಜಿಲ್ಲೆ ದಕ್ಷಿಣ 24 ಪರ್ಗಣಾಸ್‌
ಪಶ್ಚಿಮ ಬಂಗಾಳ
ಮೊ: 9831849431
ಇ-ಮೇಲ್: yssdak@yssi.org
ಹೇಗೆ ತಲುಪುವುದು

ಕೊಯಮತ್ತೂರು ಧ್ಯಾನದ ಶಿಬಿರ

ಯೋಗದಾ ಸತ್ಸಂಗ ಧ್ಯಾನ ಕೇಂದ್ರ – ಕೊಯಮತ್ತೂರು
ಪರ್ಕ್ಸ್ ಶಾಲೆ ಆವರಣ
ತಿರುಚ್ಚಿ ರಸ್ತೆ, ಬೃಂದಾವನ್‌ ಕಾಲೋನಿ
ಸಿಂಗನಲ್ಲೂರ್‌, ಕೊಯಮತ್ತೂರು 641015
ತಮಿಳು ನಾಡು
ಮೊ: 9080675994, 7200166176
ಇ-ಮೇಲ್: coimbatore@ysscenters.org
ಹೇಗೆ ತಲುಪುವುದು

ಈ ಧ್ಯಾನದ ಶಿಬಿರಗಳು ಎಲ್ಲ ಭಕ್ತಾದಿಗಳಿಗೂ ಮುಕ್ತವಾಗಿ ತೆರೆದಿದೆ: ಪುರುಷರು ಮತ್ತು ಮಹಿಳೆಯರು.‌ ಪುರುಷರಿಗೆ ಮತ್ತು ಮಹಿಳೆಯರಿಗೆ ತಂಗಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ಕೊಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ 65 ವರ್ಷ ಮೇಲ್ಪಟ್ಟ ವಿವಾಹಿತ ದಂಪತಿಗಳಿಗೆ ವಿನಾಯಿತಿ ಕೊಡಬಹುದು.

ಇದನ್ನು ಹಂಚಿಕೊಳ್ಳಿ