ವೈಎಸ್‌ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರ ಭಾರತ ಪ್ರವಾಸ — 2025

YSS-SRF-President-Swami-Chidanandaji's-Upcoming-India.Tour-2025-Featured-Image

ದಯವಿಟ್ಟು ಗಮನಿಸಿ: ಕೇವಲ ಬೆಂಗಳೂರು, ಚೆನ್ನೈ ಹಾಗೂ ಅಹ್ಮದಾಬಾದ್‌ ಕಾರ್ಯಕ್ರಮಗಳಿಗೆ ಮಾತ್ರ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆಯಿದೆ.

ವೈಎಸ್‌ಎಸ್/ಎಸ್‌ಆರ್‌ಎಫ್‌ನ ಗೌರವಾನ್ವಿತ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರು ಫೆಬ್ರುವರಿ ಮತ್ತು ಮಾರ್ಚ್ 2025 ರಲ್ಲಿ ಭಾರತ ಮತ್ತು ನೇಪಾಳಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ ಎಂದು ತಿಳಿಸಲು ನಮಗೆ ಬಹಳ ಹರ್ಷವಾಗುತ್ತದೆ. ಸ್ವಾಮೀಜಿಯವರು ಭಾರತದ ನಾಲ್ಕು ಪ್ರಮುಖ ನಗರಗಳಿಗೆ (ಬೆಂಗಳೂರು, ಚೆನ್ನೈ, ಅಹಮದಾಬಾದ್ ಮತ್ತು ನೋಯ್ಡಾ) ಮತ್ತು ನೇಪಾಳದ ಕಠ್ಮಂಡುವಿಗೆ ಪ್ರವಾಸ ಕೈಗೊಳ್ಳಲಿದ್ದಾರೆ, ಆ ನಗರಗಳಲ್ಲಿ ಹಮ್ಮಿಕೊಳ್ಳಲಿರುವ ವಿಶೇಷ ಏಕದಿನದ ಕಾರ್ಯಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

  • ಭಾನುವಾರ, ಫೆಬ್ರುವರಿ 2: ಬೆಂಗಳೂರು
  • ಭಾನುವಾರ, ಫೆಬ್ರುವರಿ 9: ಚೆನ್ನೈ
  • ಭಾನುವಾರ, ಫೆಬ್ರುವರಿ 23: ಅಹಮದಾಬಾದ್
  • ಗುರುವಾರ, ಫೆಬ್ರುವರಿ 27: ನೋಯ್ಡಾ
  • ಶನಿವಾರ, ಮಾರ್ಚ್‌ 1: ಕಠ್ಮಂಡು

ಫೆಬ್ರವರಿ 23 ರ ಅಹಮದಾಬಾದ್ ಕಾರ್ಯಕ್ರಮವನ್ನು ಲೈವ್-ಸ್ಟ್ರೀಮ್ ಮಾಡಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಹೆಚ್ಚಿನ ವಿವರಗಳನ್ನು ನಂತರ ಕೊಡಲಾಗುತ್ತದೆ.

2023 ರಲ್ಲಿ ಅವರ ಭೇಟಿ ಆಧ್ಯಾತ್ಮಿಕವಾಗಿ ಎಷ್ಟು ಪ್ರಯೋಜನಕಾರಿಯಾಗಿತ್ತು ಮತ್ತು ಸ್ಫೂರ್ತಿದಾಯಕವಾಗಿತ್ತು ಎಂಬುದನ್ನು ನಾವು ಪ್ರೀತಿಯಿಂದ ನೆನೆಸಿಕೊಳ್ಳುತ್ತಿರುವಂತೆ, ಅವರ ಮುಂಬರುವ ಪ್ರವಾಸದ ನಿರೀಕ್ಷೆಯಲ್ಲಿ ಸಂತೋಷದಿಂದ ನಮ್ಮ ಹೃದಯ ತುಂಬಿಬರುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎಲ್ಲಾ ಭಕ್ತಾದಿಗಳಿಗೆ ನಾವು ಹೃತ್ಪೂರ್ವಕ ಆಹ್ವಾನವನ್ನು ನೀಡುತ್ತೇವೆ.

para-ornament

ಕಾರ್ಯಕ್ರಮ ವಿವರಗಳು

ವೇಳಾಪಟ್ಟಿ

ಭಾನುವಾರಗಳಂದು ಬೆಂಗಳೂರು (ಫೆಬ್ರವರಿ 2), ಚೆನ್ನೈ (ಫೆಬ್ರವರಿ 9) ಮತ್ತು ಅಹಮದಾಬಾದ್ (ಫೆಬ್ರುವರಿ 23):

  • ಬೆಳಗ್ಗೆ 10:00 – ಮಧ್ಯಾಹ್ನ 01:00 — ದೀರ್ಘ ಧ್ಯಾನ
  • ಮಧ್ಯಾಹ್ನ 02:30 – 03:30 — ಕೀರ್ತನೆ/ವಿಡಿಯೋ ಶೋ
  • ಸಂಜೆ 04:30 – 06:00 — ಧ್ಯಾನ
  • ಸಂಜೆ 06:30 – 07:30 — ಗೌರವಾನ್ವಿತ ಅಧ್ಯಕ್ಷರಿಂದ ಸತ್ಸಂಗ

ನೋಯ್ಡಾ (ಗುರುವಾರ, ಫೆಬ್ರುವರಿ 27):

  • ಸಂಜೆ 04:30 – 06:00 — ಧ್ಯಾನ
  • ಸಂಜೆ 06:30 – 07:30 — ಗೌರವಾನ್ವಿತ ಅಧ್ಯಕ್ಷರಿಂದ ಸತ್ಸಂಗ

ಕಠ್ಮಂಡು (ಶನಿವಾರ, ಮಾರ್ಚ್ 1):

  • ಸಂಜೆ 04:00 – 05:00 — ಧ್ಯಾನ
  • ಸಂಜೆ 05:00 – 06:00 — ಗೌರವಾನ್ವಿತ ಅಧ್ಯಕ್ಷರಿಂದ ಸತ್ಸಂಗ
ಕಾರ್ಯಕ್ರಮ ನಡೆಯಲಿರುವ ಸ್ಥಳಗಳು

ದಯವಿಟ್ಟು ಕಾರ್ಯಕ್ರಮ ನಡೆಯುವ ಸ್ಥಳಗಳ ವಿಳಾಸ ಮತ್ತು ಗೂಗಲ್‌ ಮ್ಯಾಪ್‌ ಲಿಂಕ್‌ಗಳಿಗಾಗಿ ಈ ಕೆಳಗೆ ನೋಡಿ:

ಬೆಂಗಳೂರು

ರಾಯಲ್ ಸೆನೆಟ್
ಗೇಟ್ ಸಂಖ್ಯೆ 6, ಅರಮನೆ ಮೈದಾನ
ಜಯಮಹಲ್, ಬೆಂಗಳೂರು
ಕರ್ನಾಟಕ – 560006

ಗೂಗಲ್ ಮ್ಯಾಪ್ ಲಿಂಕ್yssi.org/PITblr

ಚೆನ್ನೈ

ಶ್ರೀ ರಾಮಚಂದ್ರ ಕನ್ವೆನ್ಷನ್ ಸೆಂಟರ್, 24/13A
ಸೌತ್ ಅವೆನ್ಯೂ ರಸ್ತೆ, ವಾಸುದೇವ ನಗರ
ತಿರುವನ್ಮಿಯೂರ್, ಚೆನ್ನೈ
ತಮಿಳುನಾಡು – 600041

ಗೂಗಲ್ ಮ್ಯಾಪ್ ಲಿಂಕ್yssi.org/PITchn

ಅಹಮದಾಬಾದ್

ಗೋಲ್ಡನ್ ಗ್ಲೋರಿ ಹಾಲ್
ಕರ್ಣಾವತಿ ಕ್ಲಬ್, ಸರ್ಖೇಜ್ – ಗಾಂಧಿನಗರ ಹೆದ್ದಾರಿ,
ಶಾಲ್ಬಿ ಆಸ್ಪತ್ರೆಯ ಎದುರು, ಸ್ಪ್ರಿಂಗ್ ವ್ಯಾಲಿ
ಮುಮತ್ಪುರ, ಅಹ್ಮದಾಬಾದ್
ಗುಜರಾತ್ – 380058

ಗೂಗಲ್ ಮ್ಯಾಪ್ ಲಿಂಕ್ yssi.org/PITamdbd

ನೋಯ್ಡಾ

ಯೋಗದಾ ಸತ್ಸಂಗ ಶಾಖಾ ಆಶ್ರಮ – ನೋಯ್ಡಾ
ಪರಮಹಂಸ ಯೋಗಾನಂದ ಮಾರ್ಗ
B-4, ಸೆಕ್ಟರ್ 62
ನೋಯ್ಡಾ – 201307
ಜಿಲ್ಲೆ. ಗೌತಮ್ ಬುದ್ಧ ನಗರ, ಉತ್ತರ ಪ್ರದೇಶ

ಗೂಗಲ್ ಮ್ಯಾಪ್ ಲಿಂಕ್yssi.org/PITnoida

ಕಠ್ಮಂಡು

ಉಲ್ಲೆನ್ಸ್ ಶಾಲೆ, ಕ್ಯಾಂಪಸ್ 1 (ಕವರ್ಡ್ ಹಾಲ್)
ಖುಮಾಲ್ತಾರ್, ಲಲಿತಪುರ-15
ನೇಪಾಳ

ಗೂಗಲ್ ಮ್ಯಾಪ್ ಲಿಂಕ್yssi.org/PITnepal

ನೋಂದಣಿ

ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಹಾಜರಾಗಲು ನೋಂದಣಿ ಅಗತ್ಯವಿದೆ. ಆದರೆ, ನೋಯ್ಡಾ ಮತ್ತು ಕಠ್ಮಂಡುವಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ನೋಂದಣಿ ಅಗತ್ಯವಿಲ್ಲ.

ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ಗಳಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್ ಭಕ್ತರು ಮಾತ್ರ ಕಾರ್ಯಕ್ರಮಕ್ಕೆ ನೋಂದಾಯಿಸಲು ಅರ್ಹರಾಗಿರುತ್ತಾರೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನುಮತಿಯಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಆದರೆ, ನೋಯ್ಡಾ ಮತ್ತು ಕಠ್ಮಂಡು ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಸಂಜೆಯ ಕಾರ್ಯಕ್ರಮವು ಭಕ್ತರ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ತೆರೆದಿರುತ್ತದೆ.

ನೋಂದಣಿ ಪ್ರಕ್ರಿಯೆ ಈಗ ಆರಂಭವಾಗಿದೆ!

ನೋಂದಣಿ ಶುಲ್ಕ ಪ್ರತಿ ವ್ಯಕ್ತಿಗೆ ₹ 1000. ಈ ಶುಲ್ಕವು ಊಟದ ಶುಲ್ಕವನ್ನು ಒಳಗೊಂಡಿರುತ್ತದೆ. ಆದರೆ, ನೀವು ವಸತಿ ಸೌಲಭ್ಯಗಳನ್ನು ಪಡೆಯಲು ಬಯಸಿದರೆ, ಪ್ರತಿ ಭಕ್ತನು ತಂಗಲು ಬಯಸುವ ದಿನಗಳ ಸಂಖ್ಯೆಯನ್ನು ಆಧರಿಸಿ ಹೆಚ್ಚುವರಿ ಶುಲ್ಕಗಳು ಇರುತ್ತವೆ. ವಸತಿ ಶುಲ್ಕಗಳು ಈ ಕೆಳಗಿನಂತಿವೆ:

  • ಅಹಮದಾಬಾದ್: ಒಬ್ಬ ವ್ಯಕ್ತಿಗೆ ಒಂದು ರಾತ್ರಿಗೆ ₹ 500
  • ಬೆಂಗಳೂರು: ಒಬ್ಬ ವ್ಯಕ್ತಿಗೆ ಒಂದು ರಾತ್ರಿಗೆ ₹ 800
  • ಚೆನ್ನೈ: ಒಬ್ಬ ವ್ಯಕ್ತಿಗೆ ಒಂದು ರಾತ್ರಿಗೆ ₹ 800

ನೋಂದಣಿ ಶುಲ್ಕವನ್ನು ಕೊಡಲು ನಿಮಗೆ ತೊಂದರೆಯಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

para-ornament

ನಿಮಗೆ ಒಂದಕ್ಕಿಂತ ಹೆಚ್ಚು ಸ್ಥಳಗಳ ಕಾರ್ಯಕ್ರಮಗಳಿಗೆ ಹಾಜರಾಗುವ ಆಸಕ್ತಿಯಿದ್ದರೆ ಸ್ವಾಗತ. ನೋಂದಣಿ ಪ್ರಕ್ರಿಯೆಯ ವಿವರವಾದ ಮಾಹಿತಿಯು ಈ ಕೆಳಗಿನಂತಿರುತ್ತದೆ:

ಡಿವೋಟೀ ಪೋರ್ಟಲ್ ಮೂಲಕ ಆನ್‌ಲೈನ್ ನೋಂದಣಿ:

ತ್ವರಿತ ಮತ್ತು ಸುಲಭದ ನೋಂದಣಿಗಾಗಿ, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿ.

ವೈಎಸ್‌ಎಸ್‌ ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೋಂದಣಿ:

ದಯವಿಟ್ಟು (0651) 6655 555 ಗೆ ಕರೆ ಮಾಡಿ ಅಥವಾ ರಾಂಚಿ ಆಶ್ರಮ ಸಹಾಯವಾಣಿಗೆ ಇಮೇಲ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಒದಗಿಸಿ:

  • ನಿಮ್ಮ ಪೂರ್ಣ ಹೆಸರು
  • ವಯಸ್ಸು
  • ವಿಳಾಸ
  • ಇಮೇಲ್
  • ಫೋನ್‌ ನಂಬರ್
  • ವೈಎಸ್‌ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್‌ಆರ್‌ಎಫ್‌ ಸದಸ್ಯತ್ವದ ಸಂಖ್ಯೆ)
  • ನಿಮ್ಮ ಉದ್ದೇಶಿತ ಆಗಮನ ಮತ್ತು ನಿರ್ಗಮನದ ದಿನಾಂಕಗಳು

ನಿಮ್ಮ ಮೊಬೈಲ್ ಅಥವಾ ಇಮೇಲ್‌ಗೆ ಕಳುಹಿಸಲಾಗುವ ಪಾವತಿ-ಲಿಂಕ್‌ನಲ್ಲಿ ನೀವು ಹಣ ಪಾವತಿಸಬಹುದು.

ಎಸ್‌ಆರ್‌ಎಫ್ ಭಕ್ತರ ನೋಂದಣಿ:

ಆಸಕ್ತ ಎಸ್‌ಆರ್‌ಎಫ್ ಭಕ್ತರು ವೈಎಸ್‌ಎಸ್ ಸಹಾಯವಾಣಿಯನ್ನು ಇಮೇಲ್ ಮೂಲಕ ಸಂಪರ್ಕಿಸಿ, ಮೇಲೆ ತಿಳಿಸಿದಂತೆ ತಮ್ಮ ಎಲ್ಲಾ ವಿವರಗಳನ್ನು ಒದಗಿಸುವಂತೆ ನಾವು ಕೇಳಿಕೊಳ್ಳುತ್ತೇವೆ.

ಎಸ್‌ಆರ್‌ಎಫ್ ಭಕ್ತರಿಗೆ ಸಮಾರಂಭದಲ್ಲಿ ಭಾಗವಹಿಸಲು ಸ್ವಾಗತವಿದೆ ಮತ್ತು ಅವರು ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಊಟ ಮಾಡಬಹುದು. ಆದರೆ ಅವರು ಹತ್ತಿರದ ಯಾವುದೇ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇವೆ.

para-ornament

ದಯವಿಟ್ಟು ಗಮನಿಸಿ:

  • ನೋಂದಣಿ ಯಶಸ್ವಿಯಾದ ನಂತರ, ನಿಮಗೆ ಇಮೇಲ್ ಅಥವಾ ಎಸ್‌ಎಮ್‌ಎಸ್‌ ಮೂಲಕ ದೃಢೀಕರಣವನ್ನು ಕಳಿಸಲಾಗುತ್ತದೆ. ನಿಮಗೆ ಅಂತಹ ಸೂಚನೆ ದೊರೆಯದಿದ್ದರೆ, ದಯವಿಟ್ಟು ವೈಎಸ್‌ಎಸ್‌ ರಾಂಚಿ ಸಹಾಯವಾಣಿಯನ್ನು ಫೋನ್ (0651) 6655 555 ಅಥವಾ ಇಮೇಲ್ helpdesk@yssi.org ಮೂಲಕ ಸಂಪರ್ಕಿಸಿ.
  • ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ: ವಿವಿಧ ಸ್ಥಳಗಳಲ್ಲಿ ವಸತಿ ಸೌಲಭ್ಯಗಳು ಸೀಮಿತವಾಗಿರುವ ಕಾರಣ, ವಸತಿ ಅಗತ್ಯವಿರುವ ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ದೃಢೀಕರಿಸಲಾಗುತ್ತದೆ.
  • ನಿಮ್ಮ ನೋಂದಣಿ ದೃಢೀಕರಣವಾದ ನಂತರ ನಿಮಗೆ ಭಾಗವಹಿಸಲು ಸಾಧ್ಯವಾಗದಿದ್ದರೆ, ನೋಂದಣಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.
ವಸತಿ

ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ

ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ಒಂದು ದಿನದ ಕಾರ್ಯಕ್ರಮಗಳಿಗಾಗಿ, ಭಕ್ತರು ಕಾರ್ಯಕ್ರಮದ ಹಿಂದಿನ ಸಂಜೆ ಆಗಮಿಸಲು ಮತ್ತು ಕಾರ್ಯಕ್ರಮ ಮುಗಿದ ನಂತರ ಮರುದಿನ ಬೆಳಿಗ್ಗೆ ಯ ತನಕ ಇರಲು ಅವಕಾಶವಿದೆ. ಈ ಸ್ಥಳಗಳಲ್ಲಿ ವಸತಿ ಸೌಲಭ್ಯಗಳು ಬೇಕಿದ್ದರೆ, ಪ್ರತಿಯೊಬ್ಬ ಭಕ್ತನು ತಂಗಲು ಬಯಸುವ ದಿನಗಳ ಸಂಖ್ಯೆಯನ್ನು ಆಧರಿಸಿ, ಹೆಚ್ಚುವರಿ ಶುಲ್ಕಗಳು (ಮೇಲೆ ನೋಂದಣಿ ವಿಭಾಗದಲ್ಲಿ ಹೇಳಿದಂತೆ) ಇರುತ್ತವೆ.

ನೋಯ್ಡಾ ಮತ್ತು ಕಠ್ಮಂಡುಗಳಲ್ಲಿ

ನೋಯ್ಡಾ ಆಶ್ರಮದಲ್ಲಿ ವಸತಿ ಲಭ್ಯತೆ ಸೀಮಿತವಾಗಿರುವುದರಿಂದ ಅದರ ಅಗತ್ಯವಿರುವವರು ದಯವಿಟ್ಟು ನೇರವಾಗಿ ಆಶ್ರಮವನ್ನು ಸಂಪರ್ಕಿಸಿ. ಅಂತಯೇ, ನೀವು ಕಠ್ಮಂಡುವಿನ ಕಾರ್ಯಕ್ರಮದಲ್ಲಿ ಭಾಗವಹಿಸಬಯಸಿದರೆ, ದಯವಿಟ್ಟು ಕಠ್ಮಂಡು ಕೇಂದ್ರವನ್ನು ಸಂಪರ್ಕಿಸಿ. ನೋಯ್ಡಾ ಆಶ್ರಮ ಮತ್ತು ಕಠ್ಮಂಡು ಕೇಂದ್ರದ ಸಂಪರ್ಕ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಯೋಗದಾ ಸತ್ಸಂಗ ಶಾಖಾ ಆಶ್ರಮ – ನೋಯ್ಡಾ
ಪರಮಹಂಸ ಯೋಗಾನಂದ ಮಾರ್ಗ
B-4, ಸೆಕ್ಟರ್ 62
ನೋಯ್ಡಾ – 201307
ಜಿಲ್ಲೆ. ಗೌತಮ್ ಬುದ್ಧ ನಗರ, ಉತ್ತರ ಪ್ರದೇಶ

ಫೋನ್: 9899811808, 9899811909,
(0120) 2400670, (0120) 2400671

ಇಮೇಲ್: noidaashram@yssi.org

ಪರಮಹಂಸ ಯೋಗಾನಂದ ಧ್ಯಾನ ಸಮಾಜ ನೇಪಾಳ (ಪಿವೈಡಿಎಸ್‌ಎನ್) – ಕೊಪುಂಡೋಲೆ
ಕಠ್ಮಂಡು, ನೇಪಾಳ
ಕೋಪುಂಡೋಲೆ

ಫೋನ್: (+977) 5452837, (+977) 5423610, (+977) 5420183,
(+977) 9851084325, (+977) 9801039667, (+977) 9801009131

ಇಮೇಲ್: kathmandu@ysscenters.org

ದಯವಿಟ್ಟು ಗಮನಿಸಿ:

  • ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ: ವಿವಿಧ ಸ್ಥಳಗಳಲ್ಲಿ ವಸತಿ ಸೌಲಭ್ಯಗಳು ಸೀಮಿತವಾಗಿರುವ ಕಾರಣ, ವಸತಿ ಅಗತ್ಯವಿರುವ ನೋಂದಣಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ದೃಢೀಕರಿಸಲಾಗುತ್ತದೆ.
  • ಹಂಚಿಕೊಳ್ಳಬೇಕಾಗುವ ವಸತಿ ಸೌಕರ್ಯವನ್ನು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಒದಗಿಸಲಾಗುವುದು. ಕುಟುಂಬ ಸದಸ್ಯರು ದಯವಿಟ್ಟು ಅದಕ್ಕನುಗುಣವಾಗಿ ಪೂರ್ವಸಿದ್ಧತೆಯಿಂದ ಪ್ಯಾಕ್‌ ಮಾಡಿಕೊಳ್ಳಬೇಕು.
  • ವಸತಿ ಅಥವಾ ಆಹಾರದ ವಿಶೇಷ ಅಗತ್ಯವಿರುವ ಭಕ್ತರು ದಯವಿಟ್ಟು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಹತ್ತಿರದ ಹೋಟೆಲ್‌ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕ ವಿವರಗಳು

ಯೋಗದಾ ಸತ್ಸಂಗ ಶಾಖಾ ಮಠ – ರಾಂಚಿ
ಪರಮಹಂಸ ಯೋಗಾನಂದ ಪಥ
ರಾಂಚಿ 834001
ಜಾರ್ಖಂಡ್

ಫೋನ್: (0651) 6655 555
(ಸೋಮ-ಶನಿ, ಬೆಳಗ್ಗೆ 09:30 – ಸಂಜೆ 04:30.)

ಇಮೇಲ್: helpdesk@yssi.org

ನೂತನ ಅತಿಥಿ

ಪರಮಹಂಸ ಯೋಗಾನಂದರ ಬಗ್ಗೆಯೂ ಅವರ ಉಪದೇಶಗಳ ಬಗ್ಗೆಯೂ ತಿಳಿಯಲು ಕೆಳಗಿನ ಲಿಂಕ್ ಗಳನ್ನು ನೋಡಿಕೊಳ್ಳಿ:

ಇದನ್ನು ಹಂಚಿಕೊಳ್ಳಿ