ಯೋಗದಾ ಸತ್ಸಂಗ ಪಾಠಗಳು
ಕ್ರಿಯಾ ಯೋಗವೂ ಸೇರಿದಂತೆ ಪರಮಹಂಸ ಯೋಗಾನಂದರು ಕಲಿಸಿದ ಧ್ಯಾನದ ವೈಜ್ಞಾನಿಕ ತಂತ್ರಗಳು – ಹಾಗೆಯೇ ಸಮತೋಲಿತ ಆಧ್ಯಾತ್ಮಿಕ ಜೀವನದ ಎಲ್ಲ ಅಂಶಗಳ ಬಗೆಗಿನ ಅವರ ಮಾರ್ಗದರ್ಶನವನ್ನು ಯೋಗದಾ ಸತ್ಸಂಗ ಪಾಠಗಳಲ್ಲಿ ಕಲಿಸಲಾಗುತ್ತದೆ. ಈ ಸಮಗ್ರ ಗೃಹ-ಅಧ್ಯಯನ ಸರಣಿಯು ತಮ್ಮ ವಿದ್ಯಾರ್ಥಿಗಳಿಗಾಗಿ ಮಹಾನ್ ಗುರುವಿನ ವೈಯಕ್ತಿಕ ಸೂಚನೆಗಳ ಸಾವಿರಾರು ಪುಟಗಳನ್ನು ಒಳಗೊಂಡಿರುತ್ತದೆ, ಅವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಸಾಪ್ತಾಹಿಕ ಅಧ್ಯಯನಗಳಲ್ಲಿ ಆಯೋಜಿಸಲಾಗಿರುತ್ತದೆ. ಯೋಗದಾ ಸತ್ಸಂಗ ಪಾಠಗಳಿಗೆ ಅರ್ಜಿ ಸಲ್ಲಿಸಿ.
ಯೋಗಿಯ ಆತ್ಮಕಥೆ
ಈ ಆಧ್ಯಾತ್ಮಿಕ ಮೇರುಕೃತಿಯ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆವೃತ್ತಿಗಳು ಮಾತ್ರ ಅಂತಿಮ ಪಠ್ಯಕ್ಕಾಗಿ ಲೇಖಕರ ಇಚ್ಚಿಸಿದ ಎಲ್ಲಾ ಆಶಯಗಳನ್ನು ಒಳಗೊಂಡಿರುತ್ತವೆ — 1924 ರಿಂದ 1952 ರಲ್ಲಿ ಅವರು ನಿಧನರಾಗುವವರೆಗೂ ಅವರೊಂದಿಗೆ ಕೆಲಸ ಮಾಡಿದ ಸಂಪಾದಕರಿಗೆ ಅವರು ತಮ್ಮ ಆಶಯಗಳನ್ನು ವೈಯಕ್ತಿಕವಾಗಿ ತಿಳಿಸಿದ್ದರು ಮತ್ತು ತಮ್ಮ ಕೃತಿಗಳ ಪ್ರಕಟಣೆಯನ್ನು ಕುರಿತ ಎಲ್ಲ ವಿಷಯಗಳನ್ನು ಅವರಿಗೇ ವಹಿಸಿದ್ದರು.
ಉಪನ್ಯಾಸಗಳು ಮತ್ತು ಪ್ರಬಂಧಗಳ ಸಂಗ್ರಹ
ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್ (ಮಾನವನ ನಿತ್ಯಾನ್ವೇಷಣೆ)
ಪರಮಹಂಸ ಯೋಗಾನಂದರ, ಸಂಗ್ರಹಿಸಲ್ಪಟ್ಟ ಉಪನ್ಯಾಸಗಳು ಮತ್ತು ಪ್ರಬಂಧಗಳು, ಅವರ ಯೋಗಿಯ ಆತ್ಮಕಥೆಯಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸಿರುವ ಸ್ಫೂರ್ತಿದಾಯಕ ಮತ್ತು ಸಾರ್ವತ್ರಿಕ ಸತ್ಯಗಳ ಆಳವಾದ ವಿಚಾರವಿನಿಮಯಗಳನ್ನು ಪ್ರಸ್ತುತಪಡಿಸುತ್ತವೆ. ಒಂದನೇ ಸಂಪುಟವು, ಅಲ್ಪಸ್ವಲ್ಪ ತಿಳಿದಿರುವ ಹಾಗೂ ವಿರಳವಾಗಿ ಅರ್ಥಮಾಡಿಕೊಂಡಿರುವಂತಹ, ಧ್ಯಾನ, ಮರಣಾನಂತರದ ಜೀವನ, ಸೃಷ್ಟಿಯ ಸ್ವರೂಪ, ಆರೋಗ್ಯ ಮತ್ತು ಉಪಶಮನ, ಮನಸ್ಸಿನ ಅಸೀಮ ಶಕ್ತಿಗಳು ಮತ್ತು ಭಗವಂತನಲ್ಲಿ ಮಾತ್ರ ಸಾರ್ಥಕತೆಯನ್ನು ಕಂಡುಕೊಳ್ಳಬಹುದಾದ ನಿತ್ಯಾನ್ವೇಷಣೆಯ ಅಂಶಗಳನ್ನು ಪರಿಶೋಧಿಸುತ್ತದೆ.
ದ ಡಿವೈನ್ ರೋಮಾನ್ಸ್
ಪರಮಹಂಸ ಯೋಗಾನಂದರ, ಸಂಗ್ರಹಿಸಲ್ಪಟ್ಟ ಉಪನ್ಯಾಸಗಳು ಮತ್ತು ಪ್ರಬಂಧಗಳ ಎರಡನೇ ಸಂಪುಟ. ವ್ಯಾಪಕ ವ್ಯಾಪ್ತಿಯ ಆಯ್ಕೆಗಳಲ್ಲಿ: ದಿವ್ಯ ಪ್ರೇಮವನ್ನು ಬೆಳೆಸಿಕೊಳ್ಳುವುದು ಹೇಗೆ; ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಉಪಶಮನಕಾರಕ ವಿಧಾನಗಳನ್ನು ಸಮನ್ವಯಗೊಳಿಸುವುದು; ಸರಹದ್ದುಗಳಿಲ್ಲದ ಜಗತ್ತು; ನಿಮ್ಮ ವಿಧಿಯನ್ನು ನಿಯಂತ್ರಿಸುವುದು; ಮರ್ತ್ಯ ಪ್ರಜ್ಞೆ ಮತ್ತು ಮರಣವನ್ನು ಜಯಿಸುವ ಯೋಗ ಕಲೆ; ವಿಶ್ವ ಪ್ರೇಮಿ; ಜೀವನದಲ್ಲಿ ಆನಂದವನ್ನು ಕಂಡುಕೊಳ್ಳುವುದು.
ಜರ್ನಿ ಟು ಸೆಲ್ಫ್-ರಿಯಲೈಝೇಷನ್
ಸಂಗ್ರಹಿಸಲ್ಪಟ್ಟ ಉಪನ್ಯಾಸಗಳು ಮತ್ತು ಪ್ರಬಂಧಗಳ ಮೂರನೇ ಸಂಪುಟವು ಶ್ರೀ ಯೋಗಾನಂದರ ವಿವೇಕ, ಸಹಾನುಭೂತಿ, ವಾಸ್ತವಿಕತೆಯಿಂದ ಕೂಡಿದ ಮಾರ್ಗದರ್ಶನ ಮತ್ತು ಹತ್ತಾರು ಆಕರ್ಷಕ ವಿಷಯಗಳ ಮೇಲಿನ ಪ್ರೋತ್ಸಾಹದ ಅನನ್ಯ ಸಂಯೋಜನೆಯನ್ನು ಪ್ರಸ್ತುತಪಡಿಸುತ್ತದೆ, ಅದು: ಮಾನವ ವಿಕಾಸವನ್ನು ತ್ವರಿತಗೊಳಿಸುವುದು, ಶಾಶ್ವತ ಯೌವನವನ್ನು ಹೇಗೆ ಅಭಿವ್ಯಕ್ತಗೊಳಿಸುವುದು, ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಭಗವಂತನನ್ನು ಮನಗಾಣುವುದು, ಇವುಗಳನ್ನೂ ಒಳಗೊಂಡಿರುತ್ತದೆ.
ಪವಿತ್ರ ಗ್ರಂಥಗಳ ಭಾಷ್ಯಗಳು
ಗಾಡ್ ಟಾಕ್ಸ್ ವಿತ್ ಅರ್ಜುನ: ದ ಭಗವದ್ಗೀತಾ — ಒಂದು ಹೊಸ ಅನುವಾದ ಮತ್ತು ಭಾಷ್ಯ
ಎರಡು ಸಂಪುಟಗಳ ಈ ಅಗಾಧ ಕೃತಿಯಲ್ಲಿ, ಪರಮಹಂಸ ಯೋಗಾನಂದರು ಭಾರತದ ಅತ್ಯಂತ ಪ್ರಸಿದ್ಧ ಗ್ರಂಥದ ಅಂತರಾಳದ ಸಾರವನ್ನು ತಿಳಿಯಪಡಿಸುತ್ತಾರೆ. ಅದರ ಮಾನಸಿಕ, ಆಧ್ಯಾತ್ಮಿಕ ಮತ್ತು ಅಭೌತಿಕ ಆಳಗಳನ್ನು ಅನ್ವೇಷಿಸುತ್ತ, ಅವರು ಭಗವತ್-ಸಾಕ್ಷಾತ್ಕಾರದ ರಾಜಯೋಗ್ಯ ವಿಜ್ಞಾನದ ಮೂಲಕ ಜ್ಞಾನೋದಯದೆಡೆಗಿನ ಆತ್ಮದ ಪಯಣದ ವಿಸ್ತಾರವಾದ ನಿರೂಪಣೆಯನ್ನು ಪ್ರಸ್ತುತಪಡಿಸುತ್ತಾರೆ.
ದ ಸೆಕೆಂಡ್ ಕಮಿಂಗ್ ಆಫ್ ಕ್ರೈಸ್ಟ್: ದ ರಿಸರೆಕ್ಷನ್ ಆಫ್ ದ ಕ್ರೈಸ್ಟ್ ವಿದಿನ್ ಯು — ಯೇಸುವಿನ ಮೂಲ ಬೋಧನೆಗಳ ಮೇಲೆ ದಿವ್ಯ ಜ್ಞಾನವನ್ನೀಯುವ ಭಾಷ್ಯ
ಸುಮಾರು 1700 ಪುಟಗಳಷ್ಟು ದೀರ್ಘವಾದ, ಸ್ಫೂರ್ತಿಯಿಂದ ಕೂಡಿದ ಈ ಅಭೂತಪೂರ್ವ ಮೇರುಕೃತಿಯಲ್ಲಿ, ಪರಮಹಂಸ ಯೋಗಾನಂದರು ಓದುಗರನ್ನು ನಾಲ್ಕು ಸುವಾರ್ತೆಗಳ ಮೂಲಕ ಆಳವಾಗಿ ಸಮೃದ್ಧಗೊಳಿಸುವ ಪ್ರಯಾಣಕ್ಕೆ ಕರೆದೊಯ್ಯುತ್ತಾರೆ. ಯೇಸುವು ತನ್ನ ಆಪ್ತ ಶಿಷ್ಯರಿಗೆ ಕಲಿಸಿದ, ಒಂದೊಂದು ಶ್ಲೋಕವನ್ನೂ ತೆಗೆದುಕೊಂಡು, ಶತಶತಮಾನಗಳ ತಪ್ಪಾದ ವ್ಯಾಖ್ಯಾನದಿಂದಾಗಿ ಅರ್ಥವಾಗದೆ ಉಳಿದಿದ್ದ, ಭಗವಂತನೊಂದಿಗಿನ ಏಕತೆಯ ಸಾರ್ವತ್ರಿಕ ಮಾರ್ಗವನ್ನು ಪ್ರಕಾಶಗೊಳಿಸುತ್ತಾರೆ: “ಕ್ರಿಸ್ತನಂತೆ ಆಗುವುದು ಹೇಗೆ, ಒಬ್ಬರ ಆತ್ಮದಲ್ಲಿ ಶಾಶ್ವತ ಕ್ರಿಸ್ತನನ್ನು ಪುನರುತ್ಥಾನ ಮಾಡುವುದು ಹೇಗೆ.”
ಆಧ್ಯಾತ್ಮಿಕ ಕವನ ಸಂಕಲನ
ಸಾಂಗ್ಸ್ ಆಫ್ ದ ಸೋಲ್
ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಕವನ ಸಂಕಲನ — ಪ್ರಕೃತಿಯ ಸೌಂದರ್ಯಗಳಲ್ಲಿ, ಮಾನವನಲ್ಲಿ, ದೈನಂದಿನ ಅನುಭವಗಳಲ್ಲಿ ಮತ್ತು ಆಧ್ಯಾತ್ಮಿಕವಾಗಿ ಜಾಗೃತಗೊಂಡ ಸಮಾಧಿಯ ಧ್ಯಾನ ಸ್ಥಿತಿಯಲ್ಲಿ ಭಗವಂತನ ನೇರ ಗ್ರಹಿಕೆಗಳ ಭಾವದ ಹೊನಲು.
ವಿಸ್ಪರ್ಸ್ ಫ್ರಮ್ ಇಟರ್ನಿಟಿ
ಧ್ಯಾನದ ಉನ್ನತ ಸ್ಥಿತಿಗಳಲ್ಲಿ ಪರಮಹಂಸ ಯೋಗಾನಂದರ ಪ್ರಾರ್ಥನೆಗಳು ಮತ್ತು ದಿವ್ಯ ಅನುಭವಗಳ ಸಂಗ್ರಹ. ಘನ ಗಾಂಭೀರ್ಯವುಳ್ಳ ಲಯ ಮತ್ತು ಕಾವ್ಯಾತ್ಮಕ ರಮ್ಯತೆಯಲ್ಲಿ ವ್ಯಕ್ತಪಡಿಸಿದ ಅವರ ಪದಗಳು ಭಗವಂತನ ಸ್ವರೂಪದ ಅಕ್ಷಯ ವೈವಿಧ್ಯತೆಯನ್ನು ಮತ್ತು ಆತನನ್ನು ಅನ್ವೇಷಿಸುವವರಿಗೆ ಅವನು ಪ್ರತಿಕ್ರಿಯಿಸುವ ಅನಂತ ಮಾಧುರ್ಯವನ್ನು ತಿಳಿಯಪಡಿಸುತ್ತವೆ.
ಸೈಂಟಿಫಿಕ್ ಹೀಲಿಂಗ್ ಅಫರ್ಮೇಷನ್ಸ್
ಪರಮಹಂಸ ಯೋಗಾನಂದರು ದೃಢೀಕರಣ ವಿಜ್ಞಾನದ ಆಳವಾದ ವಿವರಣೆಯನ್ನು ಇಲ್ಲಿ ಪ್ರಸ್ತುತಪಡಿಸುತ್ತಾರೆ. ದೃಢೀಕರಣಗಳು ಏಕೆ ಕೆಲಸ ಮಾಡುತ್ತವೆ ಮತ್ತು ಉಪಶಮನವನ್ನುಂಟು ಮಾಡಲು ಮಾತ್ರವಲ್ಲದೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅಪೇಕ್ಷಿತ ಬದಲಾವಣೆಯನ್ನು ಉಂಟುಮಾಡಲು ಪದ ಮತ್ತು ಆಲೋಚನೆಯ ಶಕ್ತಿಯನ್ನು ಹೇಗೆ ಬಳಸಬೇಕೆಂಬುದನ್ನು ಅವರು ಸ್ಪಷ್ಟಪಡಿಸುತ್ತಾರೆ.
ಇನ್ ದ ಸ್ಯಾಂಕ್ಚುಅರಿ ಆಫ್ ದ ಸೋಲ್: ಎ ಗೈಡ್ ಟು ಎಫೆಕ್ಟಿವ್ ಪ್ರೇಯರ್
ಪರಮಹಂಸ ಯೋಗಾನಂದರ ಕೃತಿಗಳಿಂದ ಸಂಕಲಿಸಲಾದ, ಈ ಸ್ಫೂರ್ತಿದಾಯಕ ಭಕ್ತಿಭಾವದ ಸಂಗಾತಿಯು, ಪ್ರಾರ್ಥನೆಯನ್ನು ಪ್ರೀತಿ, ಶಕ್ತಿ ಮತ್ತು ಮಾರ್ಗದರ್ಶನದ ದೈನಂದಿನ ಆಕರವನ್ನಾಗಿ ಮಾಡುವ ಮಾರ್ಗಗಳನ್ನು ತಿಳಿಸುತ್ತದೆ.
ಧ್ಯಾನ ಮತ್ತು ಕ್ರಿಯಾ ಯೋಗ
ಧರ್ಮದ ವಿಜ್ಞಾನ
ಪ್ರತಿಯೊಬ್ಬ ಮನುಷ್ಯನೊಳಗೆ, ಪರಮಹಂಸ ಯೋಗಾನಂದರು ಬರೆಯುತ್ತಾರೆ, "ಒಂದು ತಪ್ಪಿಸಿಕೊಳ್ಳಲಾಗದ ಬಯಕೆಯಿದೆ: ದುಃಖವನ್ನು ಜಯಿಸುವ ಮತ್ತು ಅಂತ್ಯವಿಲ್ಲದ ಸಂತೋಷವನ್ನು ಸಾಧಿಸುವ. ಈ ಹಂಬಲಗಳನ್ನು ಪೂರೈಸಲು ಹೇಗೆ ಸಾಧ್ಯ ಎಂಬುದನ್ನು ವಿವರಿಸುತ್ತಾ, ಈ ಗುರಿಯ ವಿಭಿನ್ನ ವಿಧಾನಗಳ ಸಾಪೇಕ್ಷ ಪರಿಣಾಮಕಾರಿತ್ವವನ್ನು ಅವರು ಪರಿಶೀಲಿಸುತ್ತಾರೆ.”
ಮೆಟಾಫಿಸಿಕಲ್ ಮೆಡಿಟೇಷನ್ಸ್
ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವ 300 ಕ್ಕೂ ಹೆಚ್ಚು ಧ್ಯಾನಗಳು, ಪ್ರಾರ್ಥನೆಗಳು ಮತ್ತು ದೃಢೀಕರಣಗಳು, ಅವುಗಳನ್ನು ಹೆಚ್ಚಿನ ಆರೋಗ್ಯ ಮತ್ತು ಚೈತನ್ಯ, ಸೃಜನಶೀಲತೆ, ಆತ್ಮ ವಿಶ್ವಾಸ ಮತ್ತು ಶಾಂತತೆಯನ್ನು ಹೆಚ್ಚಿಸಿಕೊಳ್ಳಲು; ಮತ್ತು ಭಗವಂತನ ಆನಂದದಾಯಕ ಉಪಸ್ಥಿತಿಯ ಪ್ರಜ್ಞಾಪೂರ್ವಕ ಅರಿವಿನಲ್ಲಿ ಹೆಚ್ಚು ಸಂಪೂರ್ಣವಾಗಿ ಬದುಕಲು ಬಳಸಬಹುದು.
ಸ್ಫೂರ್ತಿದಾಯಕ
ಬೆಳಕಿರುವೆಡೆ: ಬದುಕಿನ ಸವಾಲುಗಳನ್ನು ಎದುರಿಸಲು ಒಳನೋಟ ಮತ್ತು ಸ್ಫೂರ್ತಿ
ಪರಮಹಂಸ ಯೋಗಾನಂದರ ಬರಹಗಳಿಂದ ಸಂಕಲಿಸಲಾದ, ವಿಷಯಗಳಿಗನುಸಾರವಾಗಿ ಸಿದ್ಧಪಡಿಸಿರುವ ಚಿಂತನೆಯ ರತ್ನಗಳು. ಅನಿಶ್ಚಿತತೆ ಅಥವಾ ಬಿಕ್ಕಟ್ಟಿನ ಸಮಯದಲ್ಲಿ, ಅಥವಾ ದೈನಂದಿನ ಜೀವನದಲ್ಲಿ ಆಧಾರವಾಗಿ ಅವಲಂಬಿಸಬಹುದಾದ ಭಗವಂತನ ನಿತ್ಯ ಪ್ರಸ್ತುತ ಶಕ್ತಿಯ ನವೀಕೃತ ಅರಿವಿಗಾಗಿ, ಒಂದು ಭರವಸೆಯನ್ನೀಯುವ ಪ್ರಜ್ಞೆಯ ಕಡೆಗೆ ಓದುಗರು ಆ ಕೂಡಲೇ ತಿರುಗಬಹುದಾದ ಅನನ್ಯ ಕೈಪಿಡಿ.
ಪರಮಹಂಸ ಯೋಗಾನಂದರ ನುಡಿಮುತ್ತುಗಳು
ಮಾರ್ಗದರ್ಶನಕ್ಕಾಗಿ ಅವರ ಬಳಿ ಬಂದವರಿಗೆ ಪರಮಹಂಸ ಯೋಗಾನಂದರ ಬಿಚ್ಚುಮನಸ್ಸಿನ ಮತ್ತು ಅಕ್ಕರೆಯ ಪ್ರತಿಕ್ರಿಯೆಗಳನ್ನು ತಿಳಿಸುವ ಮಾತುಗಳು ಮತ್ತು ವಿವೇಚನಾಯುಕ್ತ ಸಲಹೆಗಳ ಸಂಗ್ರಹ. ಅವರ ಹಲವಾರು ಆಪ್ತ ಶಿಷ್ಯರಿಂದ ದಾಖಲಿಸಲ್ಪಟ್ಟ, ಈ ಪುಸ್ತಕದಲ್ಲಿನ ಕಥಾನಕಗಳು ಓದುಗರಿಗೆ ಗುರುಗಳೊಂದಿಗಿನ ಅವರ ವೈಯಕ್ತಿಕ ಭೇಟಿಗಳಲ್ಲಿ ಭಾಗಿಯಾಗಲು ಅವಕಾಶವನ್ನು ನೀಡುತ್ತದೆ.
ಆಧ್ಯಾತ್ಮಿಕ ಸಲಹೆ
ಇನ್ನರ್ ಪೀಸ್ : ಹೌ ಟು ಬಿ ಕಾಮ್ಲಿ ಆಕ್ಟಿವ್ ಅಂಡ್ ಆಕ್ಟಿವ್ಲಿ ಕಾಮ್
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ ಸಂಗ್ರಹಿಸಲಾದ ಪ್ರಾಯೋಗಿಕ ಮತ್ತು ಸ್ಫೂರ್ತಿದಾಯಕ ಮಾರ್ಗದರ್ಶಿ, ಅದು, ಧ್ಯಾನದಿಂದ ಶಾಂತಿಯನ್ನು ಸೃಷ್ಟಿಸುವ ಮೂಲಕ ನಾವು "ಸಕ್ರಿಯವಾಗಿ ಶಾಂತ"ವಾಗಿಯೂ ಮತ್ತು "ಶಾಂತವಾಗಿ ಸಕ್ರಿಯ"ವಾಗಿಯೂ ಹೇಗೆ ಇರಬಹುದು ಎಂಬುದನ್ನು ತೋರಿಸುತ್ತದೆ — ಅಂದರೆ, ಕ್ರಿಯಾತ್ಮಕ, ಸಾರ್ಥಕ ಹಾಗೂ ಸಮತೋಲಿತ ಜೀವನವನ್ನು ನಡೆಸುತ್ತ, ನಮ್ಮ ಮೂಲ ಸ್ವಭಾವದ ನಿಶ್ಚಲತೆ ಮತ್ತು ಆನಂದದಲ್ಲಿ ಕೇಂದ್ರೀಕೃತವಾಗಿರುವುದು. ತತ್ತ್ವಶಾಸ್ತ್ರ/ಆಧ್ಯಾತ್ಮಿಕ ಕ್ಷೇತ್ರದಲ್ಲಿ 2000 ದ ಇಸವಿಯ ಬೆಂಜಮಿನ್ ಫ್ರಾಂಕ್ಲಿನ್ ಪ್ರಶಸ್ತಿ ಪಡೆದ ಅತ್ಯುತ್ತಮ ಪುಸ್ತಕ.
ಯಶಸ್ಸಿನ ನಿಯಮ
ಜೀವನದಲ್ಲಿ ಒಬ್ಬರ ಗುರಿಗಳನ್ನು ಸಾಧಿಸಲು ಕ್ರಿಯಾತ್ಮಕ ತತ್ವಗಳನ್ನು ವಿವರಿಸುತ್ತದೆ ಮತ್ತು ವೈಯಕ್ತಿಕ, ವೃತ್ತಿಪರ ಹಾಗೂ ಆಧ್ಯಾತ್ಮಿತೆಯಲ್ಲಿ ಯಶಸ್ಸು ಮತ್ತು ಸಾರ್ಥಕತೆಯನ್ನು ತಂದುಕೊಡುವ ಸಾರ್ವತ್ರಿಕ ನಿಯಮಗಳನ್ನು ವಿವರಿಸುತ್ತದೆ.
ಭಗವಂತನೊಂದಿಗೆ ನೀವು ಹೇಗೆ ಮಾತನಾಡಬಲ್ಲಿರಿ
ಭಗವಂತನನ್ನು ಇಂದ್ರಿಯಾತೀತನಾದ, ಸರ್ವವ್ಯಾಪಿ ಅಮೂರ್ತ ಚೇತನ ಎಂದೂ ಹಾಗೂ ಎಲ್ಲರಿಗೂ ಆತ್ಮೀಯವಾಗಿ ಸ್ವಕೀಯನಾದ ತಂದೆ, ತಾಯಿ, ಸಖ ಮತ್ತು ಪ್ರೇಮಿ ಎಂದೂ ವ್ಯಾಖ್ಯಾನಿಸುತ್ತಾ, ಪರಮಹಂಸ ಯೋಗಾನಂದರು, ಭಗವಂತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಎಷ್ಟು ಹತ್ತಿರವಾಗಿದ್ದಾನೆ ಮತ್ತು "ಅವನ ಮೌನವನ್ನು ಮುರಿಯಲು" ಹೇಗೆ ಮನವೊಲಿಸಿ, ಅವನು ಇಂದಿಯಗ್ರಾಹ್ಯವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದು ಎಂಬುದನ್ನು ತೋರಿಸುತ್ತಾರೆ.
ಕೀರ್ತನೆ ಮತ್ತು ಭಕ್ತಿಪೂರ್ವಕ ಸಂಗೀತ
ಕಾಸ್ಮಿಕ್ ಚಾಂಟ್ಸ್ (ದಿವ್ಯ ಗೀತೆಗಳು): ದಿವ್ಯ ಸಂಸರ್ಗಕ್ಕಾಗಿ ಆಧ್ಯಾತ್ಮೀಕರಿಸಲ್ಪಟ್ಟ ಗೀತೆಗಳು
ಅರವತ್ತು ಭಕ್ತಿಗೀತೆಗಳಿಗೆ ಪದಗಳು ಮತ್ತು ಸ್ವರಪ್ರಸ್ತಾರ, ಜೊತೆ ಜೊತೆಗೆ ಆಧ್ಯಾತ್ಮಿಕ ಗಾಯನವು ಭಗವಂತನ ಸಂಸರ್ಗಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ವಿವರಿಸುವ ಪರಿಚಯ.
ಪರಮಹಂಸ ಯೋಗಾನಂದರ ಧ್ವನಿಮುದ್ರಿಕೆಗಳು
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಎಲ್ಲ ಪ್ರಕಟಣೆಗಳು ಮತ್ತು ಆಡಿಯೋ/ವಿಡಿಯೋ ರೆಕಾರ್ಡಿಂಗ್‌ಗಳ ಸಂಪೂರ್ಣ ಆಯ್ಕೆಗಾಗಿ ನಮ್ಮ ಆನ್‌ಲೈನ್ ಪುಸ್ತಕ ಮಳಿಗೆಗೆ ಭೇಟಿ ನೀಡಿ.